ಬೆಂಗಳೂರು: ರಾಹುಲ್ ಗಾಂಧಿ ಇ.ಡಿ.ವಿಚಾರಣೆ ಎದುರಿಸುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.ಇದರಿಂದ ಬಿಜೆಪಿ, ಕಾಂಗ್ರೆಸ್ ನಾಯಕರ ರಾಜಕೀಯ ಕೆಸರೆರಚಾಟ ಜೋರಾಗಿದೆ. ಸದ್ಯ ವಿರೋಧ ಪಕ್ಷದ ನಾಯಕ ಸಿದ್ದರಾಯ್ಯ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತೆ ಎಂಬ ಗಾದೆ ಮಾತಿದೆ. ಬಿಜೆಪಿಯವರಿಗೂ ಕೇಡುಗಾಲ ಶುರುವಾಗಿದೆ. ಅದಕ್ಕೆ ಹೀಗೆ ಆಡ್ತಾರೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸತತ 3 ದಿನಗಳಿಂದ ಜಾರಿ ನಿರ್ದೇಶನಾಲಯ (ಇ.ಡಿ) ರಾಹುಲ್ ಗಾಂಧಿ ವಿಚಾರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಳೆದ ಮೂರು ದಿನಗಳಿಂದ ಪ್ರತಿನಿತ್ಯ ರಾಹುಲ್ ಗಾಂಧಿ ಅವರನ್ನು ಇ.ಡಿ ಅವರು ವಿಚಾರಣೆಗೆ ಬರಬೇಕು ಎಂದು ಹೇಳಿ ನಿತ್ಯ 9 ರಿಂದ 10 ಗಂಟೆಗಳ ಕಾಲ ವಿಚಾರಣೆ ನಡೆಸುತ್ತಿದ್ದಾರೆ.
ಇದೊಂದು ಸುಳ್ಳು ಮೊಕದ್ದಮೆ. ಕಾನೂನು ರೀತಿಯ ತನಿಖೆಗೆ ನಮ್ಮ ವಿರೋಧ ಇಲ್ಲ, ಕಾಂಗ್ರೆಸ್ ಪಕ್ಷ ಕಾನೂನನ್ನು ವಿರೋಧಿಸಲ್ಲ ಎಂದಿದ್ದಾರೆ.
ನಾಳೆ ರಾಜಭವನ ಮುತ್ತಿಗೆ: ನಮ್ಮ ಎಲ್ಲಾ ಶಾಸಕರು, ಸಂಸದರು, ಕಾರ್ಯಕರ್ತರು, ನಾಯಕರು ಪಾದಯಾತ್ರೆ ಮೂಲಕ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ನಾಡಿದ್ದು ಜಿಲ್ಲಾ ಕೇಂದ್ರಗಳಲ್ಲಿ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
PublicNext
15/06/2022 10:47 pm