ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್‌ ನಾಯಕಿ ಸೋನಿಯಾ, ರಾಹುಲ್ ಗಾಂಧಿ ಅರೆಬೆತ್ತಲೆ ಫಕೀರರಾ?: ಸಿ.ಟಿ. ರವಿ ವ್ಯಂಗ್ಯ

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಮೂರನೇ ದಿನವಾದ ಇಂದು ಕೂಡ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ವಿಚಾರಣೆಗೆ ಒಳಪಟ್ಟರು. ಇದನ್ನು ಖಂಡಿಸಿ ಕಾಂಗ್ರೆಸ್‌ ಹಿರಿಯ ನಾಯಕರು, ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ಮುಖಂಡರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಾಧ್ಯಮವರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, "ಸುಬ್ರಮಣಿಯನ್ ಸ್ವಾಮಿಯವರು ಬೆನ್ನು ಹಿಡಿದ ಬೇತಾಳದ ರೀತಿಯಲ್ಲಿ ಅಕ್ರಮವನ್ನು ಬಯಲುಗೆಳೆದಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಕ್ರಮ ನಡೆಸದೇ ಇದ್ದಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ಇವರೇನು ಮಹಾತ್ಮ ಗಾಂಧಿಯ ರೀತಿಯಲ್ಲಿ ಅರೆಬೆತ್ತಲೆ ಫಕೀರರಾ" ಎಂದು ಪ್ರಶ್ನಿಸಿದ್ದಾರೆ.

"ಗಾಂಧಿ ಹೆಸರನ್ನು ಇಟ್ಟುಕೊಂಡು ಮಹಾತ್ಮ ಗಾಂಧೀಜಿ ಹೆಸರಿಗೆ ಅಪಚಾರ ಮಾಡುತ್ತಿದ್ದಾರೆ. ಇವರು (ಸೋನಿಯಾ, ರಾಹುಲ್) ಗಾಂಧಿಯಲ್ಲ ಬದಲಿಗೆ ಗ್ಯಾಂಡಿ, ರಾಹುಲ್ ಗಾಂಧಿಯವರ ತಾತ ಫಿರೋಜ್ ಗ್ಯಾಂಡಿ. ಸಾರ್ವಜನಿಕರು ಇವರೆಲ್ಲಾ ಮಹಾತ್ಮ ಗಾಂಧೀಜಿ ಕುಟುಂಬದವರು ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಕ್ರಿಮಿನಲ್ ತಪ್ಪು ಮಾಡಿದವರನ್ನೂ ವಿಚಾರಣೆ ನಡೆಸಬಾರದೆಂದರೆ, ಸಂವಿಧಾನದಲ್ಲೇ ಬದಲಾವಣೆಯನ್ನು ತರಬೇಕಾಗುತ್ತದೆ" ಎಂದು ಆಕ್ರೋಶ ಹೊರಹಾಕಿದರು.

Edited By : Vijay Kumar
PublicNext

PublicNext

15/06/2022 06:47 pm

Cinque Terre

69.99 K

Cinque Terre

15