ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಐ ಲವ್ ಕಾಂಗ್ರೆಸ್, ಐ ಲೈಕ್ ಕಾಂಗ್ರೆಸ್ ಎಂಬುದಾಗಿ ಕಾಂಗ್ರೆಸ್ ಗೆ ಮತಹಾಕೋ ಮೂಲಕ, ಅಡ್ಡ ಮತದಾನ ಮಾಡಿದಂತ ಕೋಲಾರ ಶಾಸಕ ಎಸ್ ಆರ್ ಶ್ರೀನಿವಾಸ್ ಗೌಡ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಿಡಿದ್ದಿದ್ದಾರೆ. ಈ ಸಂಬಂಧ ನಾಳೆ ಸಭಾಧ್ಯಕ್ಷರಿಗೆ ಸೂಕ್ತ ಕ್ರಮ ಕೈಗೊಳ್ಳೋದಕ್ಕಾಗಿ ದೂರು ಕೊಡಲು ನಿರ್ಧರಿಸಿದ್ದಾರೆ. ಈ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದಂತ ಶಾಸಕರಿಗೆ ಬಿಗ್ ಶಾಕ್ ನೀಡೋದಕ್ಕೆ ಜೆಡಿಎಸ್ ಮುಂದಾಗಿದೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು, ನಾಳೆ ಸಭಾಧ್ಯಕ್ಷರಿಗೆ ದೂರನ್ನ ಕೊಡುತ್ತೇವೆ. ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರನ್ನ ಕೊಡುತ್ತೇವೆ. ನಮ್ಮ ಪಕ್ಷದ ಇಬ್ಬರು ಅಡ್ಡ ಮತದಾನ ಮಾಡಿಲ್ಲ. ನೇರವಾಗಿಯೇ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಹಾಕಿದ್ದಾರೆ. ಇಂದು ಸಂಜೆ ಕುಮಾರಸ್ವಾಮಿ ವಿಶ್ರಾಂತಿ ಮುಗಿಸಿ ಬರುತ್ತಿದ್ದಾರೆ. ಅವರು ಶಾಸಕಾಂಗ ಪಕ್ಷದ ನಾಯಕರು. ಕಾನೂನು ಹೋರಾಟ ಸಂಬಂಧ ಅವರ ಜೊತೆ ಚರ್ಚಿಸುತ್ತೇವೆ. ನಾಳೆ ಸಭಾಧ್ಯಕ್ಷರನ್ನ ಭೇಟಿ ಮಾಡಿ ದೂರು ನೀಡುತ್ತೇವೆ. ನಮಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.
PublicNext
14/06/2022 06:18 pm