ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಭ್ರಷ್ಟಾಚಾರ ಮಾಡಿಲ್ಲವೆಂದ್ರೆ ತನಿಖೆಗೊಳಗಾಗಿ: ಸಂಸದ ತೇಜಸ್ವಿ ಸೂರ್ಯ

ದಾವಣಗೆರೆ: ಇ. ಡಿ. ತನಿಖೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳ ಬ್ಲಾಕ್ ಮೇಲ್ ಮಾಡೋದಕ್ಕೆ ಹೊರಟಿರುವುದು ದೌರ್ಭಾಗ್ಯ. ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದ್ದರೆ ತನಿಖೆ ಎದುರಿಸಬೇಕಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತನಿಖೆ ಆಗಬಾರದು ಎಂದರೆ ಹೇಗೆ? ರಾಜಕೀಯ ಪ್ರೇರಿತ ಪ್ರಕರಣಗಳನ್ನ ಹಿಂದೆ ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ದಾಖಲಿಸುತಿತ್ತು. ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಮೇಲೆ ಪ್ರಕರಣ ದಾಖಲಿಸಿತ್ತು. ಮೋದಿ ಅವರು ಒಬ್ಬರೇ ಹೋಗಿ ಸತತ 10 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ಆಗಿರೋದು ಪ್ರಾಥಮಿಕ ಹಂತದಲ್ಲೆ ಕಂಡುಬರುತ್ತಿದೆ. ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ತನಿಖೆಗೆ ಒಳಗಾಗಿ ಎಂದು ಹೇಳಿದರು.

ತನಿಖೆಯಲ್ಲಿ ಎಲ್ಲವೂ ಹೊರಬರಲಿ. ಭ್ರಷ್ಟಾಚಾರ ಮಾಡಿದ್ದರೆ ಸಾಮಾನ್ಯರಂತೆ ಶಿಕ್ಷೆ ಅನುಭವಿಸಲಿ. ಈ ದೇಶ ಗಾಂಧಿ ಕುಟುಂಬ ದಿಕ್ಕಿನಲ್ಲಿ ನಡೆಯೋದಿಲ್ಲ. ಕಾನೂನಿನ ಸಂವಿಧಾನದ ಪ್ರಕಾರ ನಡೆಯುತ್ತಿದೆ.

ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಈಗ ತನಿಖೆ ದಿಕ್ಕು ತಪ್ಪಿಸಲು ಸಾವಿರಾರು ಜನರನ್ನ ಬೀದಿಗೆ ಇಳಿಸಿ ಪ್ರತಿಭಟನೆಯನ್ನು ಕಾಂಗ್ರೆಸ್ ಮಾಡಿಸುತ್ತಿದೆ. ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಡುತಿದ್ದ ಕಾಂಗ್ರೆಸ್ ಪಕ್ಷವು ಯುವರಾಜನ ರಕ್ಷಣೆಗೆ ನಿಂತಿರುವುದು ಬೇಸರದ ಸಂಗತಿ ಎಂದು ಹೇಳಿದರು.

Edited By : Manjunath H D
PublicNext

PublicNext

14/06/2022 04:33 pm

Cinque Terre

44.55 K

Cinque Terre

2