ಕೋಲಂಬೋ: ಶ್ರೀಲಂಕಾದ ಪವನ್ ವಿದ್ಯುತ್ ಯೋಜನೆಯನ್ನ ಅದಾನಿ ಗ್ರೂಪ್ ಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಂತ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಆರೋಪಿಸಿದ್ದರು. ಆದರೆ, ಈಗ ಇವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಫರ್ಡಿನಾಂಡೋ ಅವರ ಈ ಒಂದು ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೂ ಕಾರಣ ಆಗಿತ್ತು. ಈ ಹೇಳಿಕೆಯನ್ನ ಹಿಂದಕ್ಕೆ ಪಡೆಯಲೇಬೇಕು ಅನ್ನೋ ಒತ್ತಡಗಳೂ ಹೆಚ್ಚಾಗಿದ್ದವು.
ಫರ್ಡಿನಾಂಡೋ ನೀಡಿರೋ ರಾಜೀನಾಮೆಯನ್ನ ಈಗ ಸ್ವೀಕರಿಸಿದ್ದೇನೆ. ಈ ಸ್ಥಾನಕ್ಕೆ ನಳಿಂದ ಇಳಂಗೋಕೋನ್ ಅವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಶ್ರೀಲಂಕಾದ ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸೆಕೆರಾ ತಿಳಿದಿಸಿದ್ದಾರೆ.
PublicNext
14/06/2022 07:30 am