ಬೆಂಗಳೂರು: ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕಣಕ್ಕಿಳಿದ ಮೂವರು ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಪಕ್ಷ ಒಂದೇ ಒಂದು ಸೀಟ್ ಗೆ ತೃಪ್ತಿಪಟ್ಟಕೊಳ್ಳಬೇಕಾಗಿದೆ. ಜೆಡಿಎಸ್‌ಗೆ ಇಲ್ಲಿ ಚಾನ್ಸೇ ಇಲ್ಲ ಬಿಡಿ.
ನಿರ್ಮಲಾ ಸೀತಾರಾಮನ್ 46 ಮತಗಳನ್ನ ಪಡೆದಿದ್ದಾರೆ. ನವರಸನಾಯಕ ನಟ ಜಗ್ಗೇಶ್ ಅವರಿಗೆ 44 ಮತಗಳು ಬಂದಿವೆ. ಲೇಹರ್ ಸಿಂಗ್ 33 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೊದಲ ಅಭ್ಯರ್ಥಿ ಜಯರಾಂ ರಮೇಶ್ 46 ಮತ ಪಡೆದು ಗೆದ್ದು ಬಿಟ್ಟಿದ್ದಾರೆ. ಆದರೆ, ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ 25 ಮತ ಪಡೆದು ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೇವಲ 30 ಮತ ಪಡೆದು ಹೀನಾಯ ಸೋಲು ಕಂಡಿದ್ದಾರೆ.
PublicNext
10/06/2022 10:28 pm