ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​​ಗೆ ಮತ್ತೊಂದು ಆಘಾತ- ಖಾಲಿ ಮತ ಪತ್ರ ಹಾಕಿದ ಗುಬ್ಬಿ ಶ್ರೀನಿವಾಸ್!

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​​ಗೆ ಡಬಲ್​ ಶಾಕ್​ ಆಗಿದೆ. 32 ಮತಗಳ ಒಂದು ಮತ ಕಾಂಗ್ರೆಸ್​ಗೆ ಬಂದರೆ ಮತ್ತೊಂದು ಮತ ಅಸಿಂಧು ಆಗಿದೆ. ಗುಬ್ಬಿ ಶ್ರೀನಿವಾಸ್ ಯಾರಿಗೂ ಮತದಾನ ಮಾಡದೇ ಖಾಲಿ ಮತ ಪತ್ರವನ್ನು ಬಾಕ್ಸ್‌​ಗೆ ಹಾಕಿದ್ದಾರೆ.

ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ, ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್​ಗೆ ನೀಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಚುನಾವಣೆ ಸಾಕಷ್ಟು ಮೂಡಿಸಿತ್ತು. ಅಂತೆಯೇ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್​ಗೆ ಮತ ಚಲಾಯಿಸಿದ್ದೇನೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.

ಇದೀಗ ಗುಬ್ಬಿ ಶ್ರೀನಿವಾಸ್ ಕೂಡ ಯಾರಿಗೂ ಮತದಾನ ಮಾಡದೆ ನಿಗೂಢ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೇ ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿದ್ದು, ತಮ್ಮ ಒಲವನ್ನು ಬಿಜೆಪಿ ಕಡೆಗೂ ಉಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್​​ಗೆ 46 ಮತಗಳು ಚಲಾವಣೆಯಾಗಿವೆ. ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್​ಗೆ 25+2 ಮತಗಳು ಬಂದಿದ್ದು, ಜೈರಾಮ್ ರಮೇಶ್ ಕಡೆಯಿಂದ ಒಂದು ಮತ ವರ್ಗಾವಣೆ ಆಗಲಿದೆ. ಹೀಗಾಗಿ 25+2+1=28 ಮತಗಳು ಮನ್ಸೂರ್​ಗೆ ಚಲಾವಣೆಗೊಂಡಂತೆ ಆಗಿದೆ.

Edited By : Vijay Kumar
PublicNext

PublicNext

10/06/2022 04:34 pm

Cinque Terre

46.2 K

Cinque Terre

0

ಸಂಬಂಧಿತ ಸುದ್ದಿ