ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇರೆಯವರ ಹೆಂಡತಿಗೆ ಲವ್ ಲೆಟರ್ ಬರೆದಿದ್ದಾರೆ: ಸಿದ್ದು ಕಾಲೆಳೆದ ಸಿ.ಎಂ ಇಬ್ರಾಹಿಂ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮ್ಯ ಅವರು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದು, 'ಬೇರೆಯವರು ತಾಳಿ ಕಟ್ಟಿದ ಹೆಂಡತಿಗೆ ಲವ್ ಲೆಟರ್ ಬರೆದಂತೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇರೆಯವರು ತಾಳಿ ಕಟ್ಟಿರೋರಿಗೆ ಲವ್ ಲೆಟರ್ ಬರೆದರೆ ಆಗುತ್ತಾ?. ಪಕ್ಕದ ಮನೆಯ ಧರ್ಮ ಪತ್ನಿಗೆ ಪತ್ರ ಬರೆಯುತ್ತೀರಾ? ಸಿದ್ದರಾಮಯ್ಯ ಪತ್ರ ಬರೆದಿರುವುದು ಅಪರಾಧ ಅಲ್ವಾ?, ಇದು ನೈತಿಕತೆಯಾ? ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತಿದೆ. ಬಿಜೆಪಿಯನ್ನು ಸೋಲಿಸಲೇ ಬೇಕು ಅಂತ ಇದ್ದರೆ ಮೊದಲ ಮತ ನಿಮಗೆ ಹಾಕೊಂಡು, 2ನೇ ಮತ ನಮಗೆ ಕೊಡಿ. ಆದರೆ ಅದನ್ನು ಕೊಡಲು ತಯಾರಿಲ್ಲ. 2ನೇ ಮತ ಕೊಡಲು ನಾವು ತಯಾರಿದ್ದೇವೆ, ಅವರು ಸಿದ್ಧರಿಲ್ಲ. ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್ ಲೆಹರ್ ಸಿಂಗ್ ಕೊಡ್ತಿರಾ? ಎಂದು ಕಿಡಿ ಕಾರಿದರು.

ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಉತ್ತರ ಭಾರತದ ಬಿಜೆಪಿಯ ಲೆಹರ್‌ಸಿಂಗ್ ಅವರನ್ನು ಗೆಲ್ಲಿಸುವುದು ಕನ್ನಡಕ್ಕೆ ಕೈ ಎತ್ತುವಾ ಕೆಲಸವಾ? ಅವರೇನು ಬಡವರಾ? ಕರ್ನಾಟಕಕ್ಕಾಗಿ ದುಡಿದವರಾ? ಲೆಹರ್ ಸಿಂಗ್ ಸೋಲುವ ಅವಶ್ಯಕತೆ ಇಲ್ಲ ಎಂಬುದೇ ಸಿದ್ದರಾಮಯ್ಯನವರ ತೀರ್ಮಾನ. ಜನರೇ ಇದನ್ನು ತೀರ್ಮಾ ಮಾಡುತ್ತಾರೆ ಎಂದು ಹೇಳಿದರು.

Edited By : Vijay Kumar
PublicNext

PublicNext

10/06/2022 11:06 am

Cinque Terre

32.61 K

Cinque Terre

1

ಸಂಬಂಧಿತ ಸುದ್ದಿ