ಮೈಸೂರು: ಬಿಜೆಪಿ ನಾಯಕರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸೀಳು ನಾಯಿಗೆ ಹೋಲಿಸಿರುವ ಗೌಪ್ಯ ಸಭೆಯ ವಿಡಿಯೋ ಬಹಿರಂಗವಾಗಿದೆ.
ಮೈಸೂರಿನ ಟಿಕೆ ಬಡಾವಣೆ ನಿವಾಸದ ಗೌಪ್ಯ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ನಾನು ಒಬ್ಬ ಮಾತನಾಡಿದರೆ 25 ಜನ ನಾಯಿಗಳಂತೆ ಬೀಳುತ್ತಾರೆ' ಎಂದಿದ್ದಾರೆ. ಈ ವೇಳೆ ಸಿದ್ದು ಆಪ್ತರು, 'ಮುಧೋಳ್ ನಾಯಿಗಳು' ಎಂದು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಅವರು, ಇಲ್ಲ ಸೀಳು ನಾಯಿಗಳ ರೀತಿ ಎನ್ನುತ್ತಾರೆ.
ಇದೇ ವೇಳೆ ಸ್ವಪಕ್ಷದ ನಾಯಕರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಅವರು ಅಷ್ಟು ಮಾತನಾಡಿದರೂ ನಮ್ಮವರು ಒಬ್ಬರು ಕೂಡ ನನ್ನ ಪರ ಮಾತನಾಡುವುದಿಲ್ಲ. ಅದೇ ಬಂದಿರುವುದು ತಾಪತ್ರಯ ಎಂದು ಆಪ್ತರ ಮುಂದೆ ತಾನು ಏಕಾಂಗಿ ಅನ್ನೋದನ್ನು ತೋಡಿಕೊಂಡಿದ್ದಾರೆ. ನನ್ನ ಕಾಲದ ಸಾಧನೆ ಬಗ್ಗೆ ಪುಸ್ತಕ ಮಾಡಿ ಕೊಟ್ಟಿದ್ದೇನೆ. ಅದನ್ನು ಓದಿ ಮಾತನಾಡುವುದನ್ನು ಹೇಳಿ ಕೊಡಬೇಕಾ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು.
PublicNext
09/06/2022 09:12 am