ಚಂಡೀಗಢ(ಪಂಜಾಬ್): ಮೇ 29 ರಂದು ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಕುಟುಂಬಕ್ಕೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಸಾಂತ್ವಾನ ಹೇಳಿದರು.ಮೂಸೆವಾಲಾ ಅವರು ಡಿಸೆಂಬರ್ 2021 ರಲ್ಲಿ ಕಾಂಗ್ರೆಸ್ ಸೇರಿದರು ಮತ್ತು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಮಾನ್ಸಾ ಕ್ಷೇತ್ರದಿಂದ ಸ್ಪರ್ಧಿಸಿದರು.
"ಕಾಂಗ್ರೆಸ್ ನ ಭರವಸೆಯ ನಾಯಕ ಮತ್ತು ಪ್ರತಿಭಾವಂತ ಕಲಾವಿದ ಸಿದ್ದು ಮೂಸೆವಾಲಾ ಅವರ ಹತ್ಯೆಯಿಂದ ತೀವ್ರ ಆಘಾತವಾಗಿದೆ" ಎಂದು ಗಾಂಧಿ ಈ ಹಿಂದೆ ಟ್ವೀಟ್ ಮಾಡಿದ್ದರು.
ಇನ್ನು ಪಂಜಾಬ್ ರಾಜ್ಯ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮೂಸೆ ವಾಲಾ ಕಾಂಗ್ರೆಸ್ ಸೇರಿದ್ದರು. ಸದ್ಯ ಈ ಹತ್ಯೆಯ ಸಮಗ್ರ ತನಿಖೆ ನಡೆಯಲಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
PublicNext
07/06/2022 03:18 pm