ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈತ್ರಿ ಸರ್ಕಾರ ಬೀಳಲೆಂದೆ ಅಮೆರಿಕಾಕ್ಕೆ ಹೋಗಿ ಕುಳಿತಿದ್ದೆ !

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಚ್‌ಡಿ.ಕುಮಾರ್ ಸ್ವಾಮಿ ಆ ಒಂದು ಹಳೆ ಸತ್ಯವನ್ನ ಈಗ ಬಿಚ್ಚಿಟ್ಟು ಆಶ್ಚರ್ಯ ಮೂಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿತ್ತು. ಆಗ ಈ ಸರ್ಕಾರ ಬಿದ್ದು ಹೋಗಲಿ ಅಂತಲೇ ಎಚ್‌ಡಿ ಕುಮಾರ್ ಸ್ವಾಮಿ ವಿದೇಶಿ ಪ್ರವಾಸದ ಪ್ಲಾನ್ ಮಾಡಿ ಅಮೆರಿಕದಲ್ಲಿ ಹೋಗಿ ಕುಳಿತಿದ್ದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ತುಂಬಾ ಹಿಂಸೆಯಾಗಿತ್ತು.2018 ರಲ್ಲಿ ಇದ್ದ ಈ ಸರ್ಕಾರವನ್ನ ತೆಗೆಯಲೇಬೇಕು ಎಂದು ಹಲವಾರು ತಿಂಗಳಿನಿಂದಲೂ ಪ್ರಯತ್ನ ನಡೆದಿತ್ತು.

ನನಗೆ ಕೊಡುತ್ತಿದ್ದ ಹಿಂಸೆಯನ್ನು ನಾನು ನೋಡಿದ್ದೆ.ಈ ಕಾರಣಕ್ಕೇನೆ ಈ ಸರ್ಕಾರ ಹೋಗಲು ಅಂತಲೇ ಅಮೆರಿಕಾ ದೇಶದಲ್ಲಿ ಹೋಗಿ ಕುಳಿತಿದ್ದೆ ಎಂದು ಸುದ್ದಿಗಾರರ ಮುಂದೆ ಕುಮಾರ್ ಸ್ವಾಮಿ ಹೇಳಿಕೊಂಡಿದ್ದಾರೆ.

Edited By :
PublicNext

PublicNext

06/06/2022 07:47 am

Cinque Terre

28.24 K

Cinque Terre

3

ಸಂಬಂಧಿತ ಸುದ್ದಿ