ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಇಂದು ನಡೆದ 'ಗರೀಬ್ ಕಲ್ಯಾಣ್ ಸಮ್ಮೇಳನ'ದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಯುವತಿಯೊಬ್ಬಳು ಚಿತ್ರಿಸಿದ ಪೇಂಟಿಂಗ್ ಅನ್ನು ಸ್ವೀಕರಿಸಲು ತಮ್ಮ ಕಾರನ್ನು ನಿಲ್ಲಿಸಿದ ಪ್ರಸಂಗ ನಡೆದಿದೆ.
ಹೌದು. ಬಾಲಕಿ ಚಿತ್ರಿಸಿದ್ದು ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿಯ ಚಿತ್ರವನ್ನು. ಪೇಂಟಿಂಗ್ ಸ್ವೀಕರಿಸಿದ ಮೋದಿ, 'ಈ ಪೇಂಟಿಂಗ್ ಮಾಡಲು ನಿಮಗೆ ಎಷ್ಟು ದಿನಗಳು ಬೇಕಾಯಿತು' ಎಂದು ಯುವತಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಯುವತಿ, 'ಇದನ್ನು ಒಂದೇ ದಿನದಲ್ಲಿ ಮಾಡಿದ್ದೇನೆ' ಎಂದರು. ಪೇಂಟಿಂಗ್ ಸ್ವೀಕರಿಸಿದ ಪ್ರಧಾನಿ ಮೋದಿ ಅವರು, ಯುವತಿಗೆ ಥ್ಯಾಂಕ್ಸ್ ಹೇಳಿ ಬೆಂಗಾವಲು ವಾಹನಗಳೊಂದಿಗೆ ಮರಳಿದರು. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
31/05/2022 06:12 pm