ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ:ಎಚ್ಚರ ಎಚ್ಚರ ಸಂಘ ಪರಿವಾರದ ಬಗ್ಗೆ ಮಾತನಾಡೋವಾಗ ಎಚ್ಚರ !

ದಾವಣಗೆರೆ: RSS ಹಾಗೂ ಸಂಘ ಪರಿವಾರದ ಬಗ್ಗೆ ಮಾತಾಡುವಾಗ ಎಚ್ಚರವಿರಲಿ. ಮಾಜಿ ಸಿಎಂ ಸಿದ್ದರಾಮಯ್ಯನೇ ಆಗಿರಲಿ, ಯಾರೇ ಆಗಿರಲಿ. ಸಂಘದ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನಿಂದ ಹಿಡಿದು ಎಲ್ಲಾ ಕಾಂಗ್ರೆಸ್ ಮುಖಂಡರು RSS ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು‌.

RSS ನಿಂದಲೇ ದೇಶದ ಸಂಸ್ಕೃತಿ ಹಾಗೂ ಘನತೆ ಉಳಿದಿದೆ. ದೇಶಕ್ಕೆ RSS ಕೊಡುಗೆ ಬಹಳ ಇದೆ. ನಾವು ಸುಭದ್ರವಾಗಿರುವುದಕ್ಕೆ RSS ಹಾಗೂ ಸಂಘ ಪರಿವಾರ ಕಾರಣ. ಇದನ್ನ ನೋಡಿಕೊಂಡು RSS ಬಗ್ಗೆ ಮಾತಾಡಬೇಕು. ಕೇವಲವಾಗಿ ಮಾತನಾಡುವುದು ಶೋಭೆ ತರುವಂತದ್ದಲ್ಲ ಎಂದು ಅಭಿಪ್ರಾಯಪಟ್ಟರು‌.

Edited By : Nagesh Gaonkar
PublicNext

PublicNext

31/05/2022 03:31 pm

Cinque Terre

48.13 K

Cinque Terre

2

ಸಂಬಂಧಿತ ಸುದ್ದಿ