ಕೊಪ್ಪಳ: ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾವ ನಾಯಕರ ಮನೆಗೂ ಹೋಗಿಲ್ಲ. ನಾನು ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಹಣೆ ಬರಹದಲ್ಲಿದ್ದರೆ ಆಗೇ ಆಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಬಳೂಟಗಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಡಾ. ಡಿ.ಆರ್. ಅಂಬೇಡ್ಕರ್ ಈ ದೇಶದ ಮೊದಲ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಪ್ರತ್ಯೇಕವಾಗುತ್ತಿರಲಿಲ್ಲ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ದಲಿತರು ಭಾರತಕ್ಕೆ ಬನ್ನಿ ಎಂದು ಅಂಬೇಡ್ಕರ್ ಕರೆ ನೀಡಿದ್ದರು. ಆದರೆ ಜವಾಹರ ಲಾಲ್ ನೆಹರು ತಾವು ಪ್ರಧಾನಿಯಾಬೇಕೆಂಬ ಕಾರಣಕ್ಕೆ ದೇಶ ವಿಭಜನೆ ಮಾಡಿದರು. ನೆಹರು ಈ ದೇಶಕ್ಕೆ ಶಾಪವಾಗಿದ್ದರು. ಅವರಿಂದಲೇ ದೇಶ ವಿಭಜನೆಯಾಗಬೇಕಾಯಿತು' ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನೆಹರು ಅವರು ಮಾಡಿದ ಎಲ್ಲ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ದೊಡ್ಡ ದೊಡ್ಡ ದೇಶಗಳ ನಾಯಕರು ಇಂದು ಮೋದಿ ಅವರ ಕಾರ್ಯವೈಖರಿಗೆ ಬೆದರಿ ಅವರ ಹಿಂದೆ ನಿಲ್ಲುತ್ತಿದ್ದಾರೆ. ಭಾರತದಲ್ಲಿದಲ್ಲಿರುವವರೆಲ್ಲರೂ ಈ ನೆಲದವರು. ಆದರೆ ಮೊಗಲರು ತಮ್ಮ ದಬ್ಬಾಳಿಕೆಯಿಂದ ಅವರನ್ನ ಮತಾಂತರ ಮಾಡಿದ್ದಾರೆ ಎಂದರು.
PublicNext
28/05/2022 07:50 am