ಭೂಪಾಲ್: ಬಡವನ ಎದೆಯಲ್ಲಿ ಬೆಟ್ಟದಷ್ಟು ಪ್ರೀತಿ ಇರುತ್ತೆ ಎಂಬುದಕ್ಕೆ ಈ ಸಂಗತಿ ಉತ್ತಮ ಉದಾಹರಣೆ ಆಗಬಲ್ಲದು. ಮಧ್ಯಪ್ರದೇಶದ ಭೋಪಾಲ್‌ನ ಭಿಕ್ಷುಕನೋರ್ವ ತನ್ನ ಪತ್ನಿ ಮೇಲಿನ ಪ್ರೀತಿಗಾಗಿ ಮೊಪೆಡ್ ಬೈಕ್‌ಅನ್ನೇ ಖರೀದಿಸಿದ್ದಾನೆ. ಇದಕ್ಕಾಗಿ ಆತ ಬರೋಬ್ಬರಿ 90 ಸಾವಿರ ರೂ ಖರ್ಚು ಮಾಡಿದ್ದಾನೆ. ಮಧ್ಯ ಪ್ರದೇಶದ ಚಿಂದ್ವಾರ ಮೂಲದ ಈತನಿಗೆ ಕಾಲಿನಲ್ಲಿ ಸಮಸ್ಯೆ ಇರೋದ್ರಿಂದ ಓಡಾಡಲು ಶಕ್ತಿ ಇಲ್ಲ.
ಮೊದಲು ಈ ಭಿಕ್ಷುಕ ದಂಪತಿ ಸೈಕಲ್ ಮೇಲೆಯೇ ಪ್ರಯಾಣಿಸುತ್ತಿದ್ದರು. ಆಗ ತನ್ನ ಬೆನ್ನು ನೋಯುತ್ತಿದೆ ಎಂದು ಪತ್ನಿ ಹೇಳುತ್ತಿದ್ದಳು. ಪತ್ನಿಯ ಬೆನ್ನು ನೋವು ದೂರ ಮಾಡಲು ಈ ಭಿಕ್ಷುಕ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಒಟ್ಟು ಹಣವನ್ನು ನಗದು ರೂಪದಲ್ಲಿ ಕೊಟ್ಟ ಭಿಕ್ಷುಕ ಸಾಹು, ಮೊಪೆಡ್ ಬೈಕ್ ಖರೀದಿಸಿದ್ದಾನೆ. ಈಗ ನಾವು ಸಿಯೋನಿ, ಭೋಪಾಲ್ ಮತ್ತು ಇಂದೋರ್‌ನಲ್ಲಿ ಆರಾಮಾಗಿ ಓಡಾಡಬಹುದು ಎಂದು ಸಾಹು ಹೇಳಿದ್ದಾನೆ. ಈತ ತನ್ನ ಪತ್ನಿಯನ್ನು ಕೂರಿಸಿಕೊಂಡು ಮೊಪೆಡ್ ಬೈಕ್ ಮೇಲೆ ಓಡಾಡುವ ದೃಶ್ಯಗಳು ವೈರಲ್ ಆಗುತ್ತಿವೆ.
PublicNext
26/05/2022 05:43 pm