ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಂಬೂಲ ಪ್ರಶ್ನೆ,ಭವಿಷ್ಯ ಹೇಳುವವರನ್ನು ಅರೆಸ್ಟ್ ಮಾಡಿ : ಡಿಕೆಶಿ

ಬೆಂಗಳೂರು: ಮಂಗಳೂರಿನ ಮಳಲಿ ಮಸೀದಿಯಲ್ಲಿ ದೈವಸ್ಥಾನ ಕುರುಹು ಪತ್ತೆ ಹಿನ್ನೆಲೆಯಲ್ಲಿ ಕೇರಳ ಪ್ರಖ್ಯಾತ ಜ್ಯೋತಿಷ ದೈವಜ್ಞ ಜಿಪಿ ಗೋಪಾಲಕೃಷ್ಣ ಪಣಿಕ್ಕರ್ ತಾಂಬೂಲ ಪ್ರಶ್ನೆ ನಡೆಸಿದ್ದು, ಮಳಲಿ ಮಸೀದಿಯಲ್ಲಿ ದೈವೀ ಸಾನಿಧ್ಯ ಇತ್ತು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮಳಲಿ ಮಸೀದಿ ವಿವಾದದ ಸಂಚಲವನ್ನು ಸೃಷ್ಟಿಸಿದೆ. ಇದರ ಮಧ್ಯೆ ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆದಿದೆ. ತಾಂಬೂಲ ಪ್ರಶ್ನೆಯಲ್ಲಿ ದೇವರು ಇತ್ತು ಎಂಬ ಬಗ್ಗೆ ಕೇರಳದಿಂದ ಆಗಮಿಸಿದ್ದ ತಂತ್ರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಇದು ಭಾವನಾತ್ಮಕ ವಿಚಾರ, ಅದನ್ನು ಅವರ ಮನೆಯಲ್ಲಿಟ್ಟಿಕೊಳ್ಳಲಿ. ಸರ್ಕಾರ ಮಧ್ಯಪ್ರವೇಶಿಸಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು. ದಕ್ಷಿಣ ಕನ್ನಡ ಡಿಸಿ, ಎಸ್ ಪಿ ಕೂಡಲೇ ಮಧ್ಯಪ್ರವೇಶಿಸಬೇಕು. ಇವರು ರಾಜ್ಯವನ್ನು ಸಾಯಿಸುತ್ತಿದ್ದಾರೆಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.

Edited By : Nirmala Aralikatti
PublicNext

PublicNext

26/05/2022 08:04 am

Cinque Terre

34.7 K

Cinque Terre

28