ಪಾಟ್ನಾ: ಶೀಘ್ರದಲ್ಲಿಯೇ ಬಿಹಾರ ರಾಜಕೀಯದಲ್ಲಿ ಸಂಚಲನವಾಗಬಲ್ಲದು ಎಂಬ ಸೂಚನೆ ಸಿಕ್ಕಿದೆ. ಒಂದೆಡೆ ಲಾಲು ಪ್ರಸಾದ್ ಯಾದವ್ ಅವರ ಪಕ್ಷ ರಾಷ್ಟ್ರೀಯ ಜನತಾ ದಳ ಭಾರತೀಯ ಜನತಾ ಪಕ್ಷ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ನಡೆಸಿದೆ. ಮತ್ತೊಂದೆಡೆ, ಈಗ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಜನತಾ ದಳ ಯುನೈಟೆಡ್ ಶಾಸಕರಿಗೆ ಮುಂದಿನ 72 ಗಂಟೆಗಳ ಕಾಲ ಪಾಟ್ನಾದಲ್ಲಿ ಇರುವಂತೆ ಆದೇಶ ಹೊರಡಿಸಿದ್ದಾರೆ.
ಸಿಎಂ ನಿತೀಶ್ ಆದೇಶದ ನಂತರ ರಾಜಕೀಯ ಸಂಚಲನ ಉಂಟಾಗಿದೆ. ಮುಂದಿನ 72 ಗಂಟೆಗಳು ಬಿಹಾರದ ರಾಜಕೀಯಕ್ಕೆ ಅತ್ಯಂತ ಮಹತ್ವದ್ದಾಗಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಮುಖಂಡರು ಮತ್ತು ಶಾಸಕರೊಂದಿಗೆ ಆಗಾಗ್ಗೆ ಸಭೆ ನಡೆಸುತ್ತಿದ್ದಾರೆ. ಸಿಎಂ ನಿತೀಶ್ ಅವರ ಕ್ರಿಯಾಶೀಲತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಮೇಲಾಟದ ಚರ್ಚೆಯೂ ಜೋರಾಗಿದೆ. ನಿತೀಶ್ ಕುಮಾರ್ ಬಿಜೆಪಿಯಿಂದ ಬೇರ್ಪಟ್ಟು ಮತ್ತೊಮ್ಮೆ ಆರ್‌ಜೆಡಿ ಜೊತೆ ಸರ್ಕಾರ ರಚಿಸಲು ಯೋಜಿಸುತ್ತಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ 72 ಗಂಟೆಗಳಲ್ಲಿ ಉತ್ತರ ಸಿಗಬಹುದು ಎಂದು ನಂಬಲಾಗಿದೆ. ರಾಜ್ಯದ ರಾಜಕೀಯ ಯಾವ ಕಡೆ ಕೂರಲಿದೆ ಎಂಬುದು ಮುಂದಿನ 72 ಗಂಟೆಗಳಲ್ಲಿ ನಿರ್ಧಾರವಾಗಲಿದೆ.
ಸಿಎಂ ನಿತೀಶ್ ಕುಮಾರ್ ಅವರು ಒಂದು ದಿನ ಮುಂಚಿತವಾಗಿ ಪಕ್ಷದ ಕಚೇರಿಯಲ್ಲಿ ತಮ್ಮ ಸಚಿವರು ಮತ್ತು ಶಾಸಕರು ಹಾಗೂ ಮಾಜಿ ಶಾಸಕರನ್ನು ಭೇಟಿ ಮಾಡಿದ್ದಾರೆ. ಈ ಸಭೆಯ ನಂತರ, ಲಾಲು ಕುಟುಂಬದ ಮೇಲಿನ ದಾಳಿಯ ಕುರಿತು ಕೇಳಿದ ಪ್ರಶ್ನೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, ದಾಳಿ ಯಾರು ಮಾಡಿದ್ದಾರೋ ಅವರು ಮಾತ್ರ ಹೇಳಲು ಸಾಧ್ಯವಾಗುತ್ತದೆ. ನಿತೀಶ್ ಅವರ ಹೇಳಿಕೆಯು ಲಾಲು ಕುಟುಂಬದ ಮೇಲಿನ ದಾಳಿಗೆ ಬಿಜೆಪಿಯನ್ನು ದೂಷಿಸುವಂತಿದೆ ಎಂದು ಹೇಳಲಾಗಿದೆ.
PublicNext
23/05/2022 06:04 pm