ದಾವಣಗೆರೆ: ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಲೈಸನ್ಸ್ ಇಲ್ಲದೆ ಕೆಎಸ್ಆರ್ಟಿಸಿ ಬಸ್ ಓಡಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು. ಬೈರನಹಳ್ಳಿ ಗ್ರಾಮದಲ್ಲಿ ಬಸ್ನ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಈ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದರು. ಹಾಗಾಗಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಬಸ್ ಬಿಡಿಸಿ, ಖುದ್ದು ರೇಣುಕಾಚಾರ್ಯ ಅವರೇ ಕೆಎಸ್ಆರ್ಟಿಸಿ ಬಸ್ ಚಲಾಯಿಸಿ ಚಾಲನೆ ನೀಡಿದರು. ಜೊತೆಗೆ ಮೊದಲ ಟಿಕೆಟ್ ಅನ್ನು ಕೂಡ ಖರೀದಿಸಿದ್ದಾರೆ.
ಇನ್ನು ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಗ್ರಾಮಸ್ಥರು ಎಲ್ಲರೂ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಲೈಸನ್ಸ್ ಇಲ್ಲದೆ ಬಸ್ ಚಲಾಯಿಸಿದ್ದಕ್ಕೆ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಮೇಲೆ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಕೂಡ ಲೈಸನ್ಸ್ ಇಲ್ಲದೆ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಬಸ್ ಓಡಿಸಿದ್ದರು.
PublicNext
22/05/2022 06:14 pm