ನೇಪಾಳ: ಪ್ರಧಾನಿ ನರೇಂದ್ರ ಮೋದಿ ಸದ್ಯ ನೇಪಾಳ ಪ್ರವಾಸದಲ್ಲಿಯೇ ಇದ್ದಾರೆ. ಬುದ್ದ ಹುಟ್ಟಿದ್ದ ಈ ಊರಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.
ಹೌದು. ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾರವರ ಆಹ್ವಾನದ ಮೇರೆಗೆ ಮೋದಿ ನೇಪಾಳಕ್ಕೆ ಭೇಟಿಕೊಟ್ಟಿದ್ದಾರೆ. ವಿಶೇಷ ಅಂದ್ರೆ ಮಾಯಾ ದೇವಿ ದೇಗುಲಕ್ಕು ಭೇಟಿ ಕೊಟ್ಟರು. ಬುದ್ಧನ ಜನ್ಮದ ಗುರುತು ಕಲ್ಲಿಗೆ ಗೌರವ ಕೂಡ ಸಲ್ಲಿಸಿದರು.
ಇದೇ ದೇಗುಲದ ಪಕ್ಕದಲ್ಲಿಯೇ ಇರೋ ಐತಿಹಾಸಿಕ ಅಶೋಕ ಸ್ತಂಭದ ಬಳಿ ಉಭಯ ದೇಶದ ಪ್ರಧಾನಿಗಳು ಇಲ್ಲಿ ದೀಪ ಕೂಡ ಬೆಳಗಿಸಿದರು.
PublicNext
17/05/2022 09:01 am