ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಕುರಿತು ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಆಳ್ವಿಕೆ ಅವಧಿಯಲ್ಲಿ ಯುವಕರು ಬದುಕನ ಭರವಸೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನೊಂದ ಪಿಎಸ್‌ಐ ಅಭ್ಯರ್ಥಿಗಳು ಬರೆದಿದ್ದು ಎನ್ನಲಾದ ರಕ್ತದ ಪತ್ರದ ಫೋಟೋಗಳನ್ನು ಶೇರ್ ಮಾಡಿರುವ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
'ಗುತ್ತಿಗೆದಾರರು ಪತ್ರಗಳನ್ನು ಬರೆದರು, ಸಂತೋಷ್ ಪಾಟೀಲ್ ಪತ್ರ ಬರೆದರು, ಈಗ ಪಿಎಸ್ಐ ಅಕ್ರಮದಿಂದ ನೊಂದವರು ಪತ್ರ ಬರೆದಿದ್ದಾರೆ. ಸಂತೋಷ್ ಪಾಟೀಲ್ ಜೀವ ಬಿಟ್ಟರೂ ಜಗ್ಗದ ಬಿಜೆಪಿ, ರಕ್ತಪತ್ರಕ್ಕೆಲ್ಲ ಬಗ್ಗುವುದೇ?' ಎಂದು ಪ್ರಶ್ನಿಸಿರುವ ಅವರು 'ಬಿಜೆಪಿ ಆಳ್ವಿಕೆಯಿಂದಾಗಿ ಯುವಕರು ಬದುಕಿನ ಭರವಸೆ ಕಳೆದುಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ' ಎಂದಿದ್ದಾರೆ.
PublicNext
16/05/2022 05:53 pm