ಉದಯಪುರ: ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚರ್ಚೆ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕುಟುಂಬ ರಾಜಕಾರಣ ತಡೆಯಲು ಹೊಸ ಫಾರ್ಮುಲಾ ತರಲು ಮುಂದಾಗಿದೆ. ಅದರ ಮಧ್ಯೆ ಕಾಂಗ್ರೆಸ್ ಕೂಡ ಒಬ್ಬನಿಗೆ ಒಂದು ಹುದ್ದೆ ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮವನ್ನ ಜಾರಿಗೊಳಿಸಲು ಒಪ್ಪಿಕೊಂಡಿದೆ.
ಹೌದು. ರಾಜಸ್ಥಾನದ ಉದಯಪುರದಲ್ಲಿ ನಡೆದ ಮೂರು ದಿನಗಳ ಚಿಂತನ ಸಭೆಯಲ್ಲಿ ಒಂದು ಹುದ್ದೆ ಒಂದು ಟಿಕೆಟ್ ನಿಯಮ ಜಾರಿಗೆ ಅನುಮೋದನೆ ಸಿಕ್ಕಿದೆ.
ಈ ಒಂದು ನಿಯಮದಿಂದ ಏನೆಲ್ಲ ಬದಲಾವಣೆ ಆಗುತ್ತದೆಯೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ಸರ್ಕಸ್ ಮಾಡ್ತಿರೋದಂತೂ ಸತ್ಯ.
PublicNext
16/05/2022 07:26 am