ಮಂಡ್ಯ: ಇಲ್ಲಿಯ ಮೈಶುಗರ್ ಫ್ಯಾಕ್ಟರಿಯ ಮುಂದೆ ಯೂಥ್ ಕಾಂಗ್ರೆಸ್ ನ ಮಹ್ಮದ್ ನಲಪಾಡ್ ಹಾಗೂ ಪೊಲೀಸರ ಮಧ್ಯೆ ಭಾರೀ ವಾಗ್ವಾದವೇ ನಡೆದು ಬಿಟ್ಟಿದೆ. ನಲಪಾಡ್ ಜೊತೆಗೆ ಬಂದಿದ್ದ ಸಾಕಷ್ಟು ಕಾಂಗ್ರೆಸ್ ಕಾರ್ಯಕತರು ಮೈಶುಗರ್ ಫ್ಯಾಕ್ಟರಿ ಪ್ರವೇಶಿಸಲು ಹರಸಾಹಸ ಪಟ್ಟು ಕೊನೆಗೆ ಅರೆಸ್ಟ್ ಕೂಡ ಆಗಿದ್ದಾರೆ.
ಮೈಶುಗರ್ ಫ್ಯಾಕ್ಟರಿಯನ್ನ ನಾವು ಸ್ವಚ್ಛಗೊಳಿಸುತ್ತೇವೆ. ನಮ್ಮನ್ನ ಒಳಗೆ ಬಿಡಿ. ನಮ್ಮಗೆ ಒಳಗೆ ಹೋಗಲು ಪರವಾನಗಿ ಕೂಡ ಇದೆ ಅಂತಲೇ ಮಹ್ಮದ್ ನಲಪಾಡ್ ಇಂದು ಫ್ಯಾಕ್ಟರಿ ಬಳಿಗೆ ಸಾವಿರಾರು ಕಾರ್ಯಕರ್ತರ ಜೊತೆಗೆ ಇಲ್ಲಿಗೆ ಬಂದಿದ್ದರು.
ಆದರೆ,ಪೊಲೀಸರು ಒಳಗಡೇ ಬಿಡಲೇ ಇಲ್ಲ. ಇದನ್ನ ವಿರೋಧಿಸಿದ ನಲಪಾಡ್ ಪೊಲೀಸರ ಜೊತೆಗೆ ವಾದಕಿಳಿದರು. 40 ಕಮಿಷನ್ ಗೋಷ್ಕರ ನಮ್ಮನ್ನ ಒಳಗೆ ಬಿಡುತ್ತಿಲ್ಲ. ಆ ಕಮಿಷನ್ ಹಣವನ್ನ ನಾನೇ ಕೊಡ್ತಿನಿ ಅಂತಲೂ ಹೇಳಿ ಚೆಕ್ ಪ್ರದರ್ಶನವನ್ನೂ ಇಲ್ಲಿ ಮಾಡಿಯೇ ಬಿಟ್ಟರು.
ಇವರ ಈ ಹೋರಾಟಕ್ಕೆ ಮಣಿಯ ಪೊಲೀಸರು ನಲಪಾಡ್ ಸೇರಿದಂತೆ ಎಲ್ಲರನ್ನು ಅರೆಸ್ಟ್ ಮಾಡಿದರು. ಆಗ ನಲಪಾಡ್ ಪೊಲೀಸರಿಗೆ ಏಕವಚನದಲ್ಲಿಯೇ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
PublicNext
15/05/2022 04:17 pm