ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ನಮಗೂ ಟೈಂ ಬರುತ್ತೆ, ಉತ್ತರ ಕೊಡ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್

ದಾವಣಗೆರೆ: ರಾಜಕಾರಣ ನಿಂತ ನೀರಲ್ಲ, ಅಧಿಕಾರ ಶಾಶ್ವತ ಇಲ್ಲ, ಎರಡು ಬಾರಿ ಮಂತ್ರಿ ಆಗಿದ್ದೇನೆ. ಈಗ ಆರಾಮಾಗಿ ಸಂತೋಷವಾಗಿಲ್ವಾ. ನನಗೆ ಅಧಿಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಕಮೀಷನ್ ಪಡೆದು ಜೇಬು ತುಂಬಿಸಿಕೊಳ್ಳುವ ಬದಲು ಜನರಿಗಾಗಿ ಕೆಲಸ ಮಾಡಲಿ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷ ಇಲ್ಲ. ಅಭಿವೃದ್ಧಿ ಕೆಲಸಗಳನ್ನು ಹೇಗೆ ಮಾಡ್ತಾರೆ ಅಂತಾ ನೋಡೋಣ ಅಂತಾ ನಾನು ಸುಮ್ಮನಿದ್ದೇನೆ.

ಬಿಜೆಪಿಯವರ ಕಮೀಷನ್ ದಾಹದ ಬಗ್ಗೆ ಜನರಿಗೂ ಗೊತ್ತಾಗಬೇಕು ಎಂದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

ನಗರದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ನಾಯಿ, ನರಿ, ಕಾಗೆ ಕೂಗಿದರೆ, ಬೊಗಳಿದರೆ ನಾನು ಉತ್ತರ ಕೊಡಬೇಕಾ? ಅದಕ್ಕೂ ಸಮಯ ಬರುತ್ತೆ. ಅಡಿಕೆಗೆ ನಾನಾ ರೀತಿಯ ಅಡಿಕೆ ಮಿಶ್ರಣ ಮಾಡುವಲ್ಲಿ ಬಹಳ ಪರಿಣಿತರು. ಕಲಬೆರಕೆ ಮಾಡುವುದರಲ್ಲಿ ನಿಪುಣರಿದ್ದಾರೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಸರೇಳದೇ ಆರೋಪಿಸಿದರು.

ಡಿಸಿ ಆಫೀಸ್ ನಲ್ಲಿ ರೆಕಾರ್ಡ್ಸ್ ತೆಗೆದು ನೋಡಲಿ. ರಿಂಗ್ ರಸ್ತೆ ಅಗಲೀಕರಣ ಮಾಡುವ ವೇಳೆ ಬಿಜೆಪಿಯವರ ಲಾರಿ ಬಂದಿದೆಯಾ? ಟ್ರ್ಯಾಕ್ಟರ್ ಬಂದ್ವಾ? ರಿಂಗ್ ರಸ್ತೆ ಅಗಲೀಕರಣ ಮಾಡುವಾಗ ಎಷ್ಟೋ ಮಂದಿ ಮನೆ ಕಳೆದುಕೊಂಡರು.ರಾತ್ರೋರಾತ್ರಿ ಅವರಿಗೆ ಆಶ್ರಯ ಮನೆಗಳಿಗೆ ಸ್ಥಳಾಂತರ ಮಾಡಿ ಹಕ್ಕು ಪತ್ರ ಕೊಟ್ಟು, ಜಾಗ ಹೋದ ಬಗ್ಗೆ ಸರ್ವೇ ಮಾಡಿಸಿ ಕೂಡಲೇ ನೆರವಾಗಿದ್ದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಒಲಂಪಿಕ್ ನಲ್ಲಿ ಪಾಲ್ಗೊಂಡಿದ್ದರೂ, ನಾನು ಬರುವುದರೊಳಗೆ ಅವರಿಗೆ ಆಶ್ರಯ ಕಲ್ಪಿಸಿಕೊಟ್ಟಿದ್ದೆ. ಇದೆಲ್ಲಾ ಗೊತ್ತಿದೆಯಾ ಅವರಿಗೆ ಎಂದು ಪ್ರಶ್ನಿಸಿದರು.

Edited By : Manjunath H D
PublicNext

PublicNext

14/05/2022 04:15 pm

Cinque Terre

80.75 K

Cinque Terre

1