ಬೆಂಗಳೂರು:ಕನ್ನಡದ ನಟಿ ರಮ್ಯಾ ಕೆಂಡಾಮಂಡಲವಾಗಿದ್ದಾರೆ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ನಡೆಯನ್ನ ಟೀಕಿಸಿದ್ದಾರೆ. ಟ್ವಿಟರ್ ಮೂಲಕವೇ ನಲಪಾಡ ಜನ್ಮ ಜಾಲಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ರಮ್ಯಾ ಟ್ವಿಟರ್ ಮಾಡಿದ್ದರು. ಅಷ್ಟೇ ನೋಡಿ, ರಮ್ಯಾ ಮಾತಿಗೆ ಡಿಕೆಶಿ ತಿರುಗೇಟು ಕೊಟ್ಟೇ ಬಿಟ್ಟರು.
ಇದು ಮುಗಿಯಿತು ಅನ್ನೋ ಹೊತ್ತಿಗೆ, ರಮ್ಯಾ ವಿರುದ್ಧ ಮಹಮ್ಮದ್ ನಲಪಾಡ್ ಟೀಕಾ ಪ್ರಹಾರ ಮಾಡಿದ್ದಾರೆ. ಇಲ್ಲಿವರೆಗೂ ರಮ್ಯಾ ಎಲ್ಲಿದ್ದರೋ ಏನೋ. ಈಗ ಪ್ರಚಾರ ಪಡೆಯಲು ಬಂದಿದ್ದಾರೆ ಅಂತಲೂ ಮಂಗಳೂರಲ್ಲಿ ಟೀಕಿಸಿದ್ದಾರೆ.
ಅದಕ್ಕೇನೆ ರಮ್ಯಾ ಟ್ವಿಟರ್ ಮೂಲಕವೇ ನಲಪಾಡಗೂ ಉತ್ತರ ಕೊಟ್ಟಿದ್ದಾರೆ. "ಎಂಎಲ್ಎ ಹಾರೀಶ್ ಪುತ್ರ ಈ ನಲಪಾಡ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಈತ ನನ್ನ ಬಗ್ಗೆ ಮಾತನಾಡುತ್ತಾನೆ ವ್ಹಾ" ಅಂತಲೇ ರಮ್ಯಾ ಟೀಕೆ ಮಾಡಿದ್ದಾರೆ.
PublicNext
12/05/2022 11:02 pm