ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲಿದೆ. ಕೆಜಿಎಫ್‌ನಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತೇವೆ. ಅಲ್ಲಿ ತಮಿಳು ಭಾಷಿಗರ ಸಂಖ್ಯೆ ಹೆಚ್ಚಾಗಿದೆ. ಕೋಲಾರ ಸಂಸದರು ಚೆನ್ನಾಗಿಯೇ ಕೆಲಸ ಮಾಡುತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..
ಮೇಕೆದಾಟು ವಿಚಾರವಾಗಿ ಪ್ರತಿಕ್ರಿಯಿಸಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಬಾಂಧವ್ಯಕ್ಕೆ ಹಲವು ವಿಚಾರಗಳಿವೆ. ವ್ಯಾಪಾರ ಕೃಷಿ ವಿಚಾರಗಳಲ್ಲಿ ಸಂಬಂಧವಿದೆ. ತಮಿಳುನಾಡಿನ ಎಷ್ಟೋ ಜನ ಬೆಂಗಳೂರಿನ ಐ.ಟಿಯಲ್ಲಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಕಾವೇರಿ ವಿಚಾರವಾಗಿ ಜನರನ್ನು ಡಿವೈಡ್ ಮಾಡಿದೆ. ಮೇಕೆದಾಟು ವಿಚಾರ ಕೇಂದ್ರ ಸಚಿವರೊಬ್ಬರ ಕೈಯಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರವೇ ಆಗಲಿದೆ. ಯಾರಿಗೂ ತೊಂದರೆ ಆಗಲ್ಲ ಎನ್ನುತ್ತ ಮೇಕೆದಾಟು ವಿಚಾರವಾಗಿ ನುಣುಚಿಕೊಂಡರು. ಇನ್ನು ಕರ್ನಾಟಕ- ತಮಿಳುನಾಡಿನ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ನಾನು ಯೋಜನೆ ಪರವೋ ವಿರುದ್ಧವೋ ಎನ್ನುವುದು ಮುಖ್ಯವಲ್ಲ. ಕಾಂಗ್ರೆಸ್ ಪಕ್ಷ ಜನರನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದರು.
ಪಿಎಸ್ಐ ಹಗರಣ ಕುರಿತು ತಿಳಿದುಕೊಂಡು ಮಾತನಾಡುತ್ತೇನೆ. ಹಗರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಾರಿಗೂ ಅನ್ಯಾಯ ಆಗಬಾರದು ಎಂದಿದ್ದಾರೆ. ಅಂತೂ ತಮಿಳು ಭಾಷಿಕ ಮತದಾರರು ಹೆಚ್ಚಾಗಿರುವ ಕೋಲಾರದ ಕೆ.ಜಿ.ಎಫ್‌ನಲ್ಲಿ ಬಿಜೆಪಿ ಗೆಲುವುಗಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸಿರುವುದು ಸ್ಪಷ್ಟವಾಗುತ್ತಿದೆ..
ಸುರೇಶ್ ಬಾಬು Public Next ಬೆಂಗಳೂರು.
PublicNext
08/05/2022 10:21 pm