ಬೆಂಗಳೂರು: ಸಿದ್ದರಾಮಯ್ಯ ಅವರೇ, ನಿಮ್ಮ ಬಾಯಿಯಿಂದ ಇಂತಹ ಮಾತುಗಳು ಹೊರಬಂದರೆ ರಾಜ್ಯದ ಜನತೆ ನವರಂಧ್ರಗಳಿಂದ ನಗುತ್ತಾರೆ. ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ ಮಜಾವಾದಿ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ. ಹೈಕಮಾಂಡ್‌ಗೆ ನೀಡಿದ ಕಪ್ಪವನ್ನು ಡೈರಿಯಲ್ಲಿ ಬರೆದಿಟ್ಟ ನೀವು ಈಗ ಸತ್ಯ ಹರಿಶ್ಚಂದ್ರನಂತೆ ವರ್ತಿಸಿದರೆ ನಂಬಲು ಸಾಧ್ಯವೇ? ಎಂದು ರಾಜ್ಯ ಬಿಜೆಪಿಯು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟ್ವೀಟ್ ಮಾಡಿದೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ, ಮಾನ್ಯ ಸಿದ್ಧರಾಮಯ್ಯ ಅವರೇ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಗಾಂಧಿ ಅವರ ರಾಜಿನಾಮೆ ಕೇಳುವ ತಾಕತ್ತಿದೆಯೇ?, ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇರುವ ಕಾಂಗ್ರೆಸ್ ನಾಯಕರ ಮಾನ ಮರ್ಯಾದೆಯನ್ನು ಎಂದು ಪ್ರಶ್ನಿಸುತ್ತೀರಿ? ಎಂದು ಹೇಳಿದೆ.
ಮಾನ್ಯ ಸಿದ್ಧರಾಮಯ್ಯ ಅವರೇ, ಲಕ್ಷಾಂತರ ಮೌಲ್ಯದ ವಾಚ್ ಹಗರಣ ಆದಾಗ ನಿಮ್ಮ ಮಾನ ಮಾರ್ಯಾದೆ ಎಲ್ಲಿತ್ತು?, ಅರ್ಕಾವತಿ ಪ್ರಕರಣದಲ್ಲಿ ನಿಮ್ಮ ಮಾನ-ಮರ್ಯಾದೆ ಎತ್ತರಕ್ಕೇರಿತ್ತೇ?, ಜೈಲಿನಿಂದ ಬಂದವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡುವಾಗ ನಿಮ್ಮ ಮಾನ-ಮರ್ಯಾದೆ ಎಲ್ಲಿತ್ತು? ಎಂದು ವಾಗ್ದಾಳಿ ನಡೆಸಿದೆ.
PublicNext
08/05/2022 04:55 pm