ಗದಗ: ಮುಖ್ಯ ಮಂತ್ರಿಯಾಗಲು 2500 ಕೋಟಿ ರೂಪಾಯಿ ಬೇಡಿಕೆ ವಿಚಾರವನ್ನು ಜವಾಬ್ದಾರಿ ಇರುವವರು ಹಾಗೂ ಒಂದು ಪಕ್ಷದ ಶಾಸಕರು ಹೇಳಿದ್ದಾರೆ ಅಂದರೆ ಇದರಲ್ಲಿ ಸತ್ಯಾಂಶ ಇರಬೇಕು. ಈ ಬಗ್ಗೆ ಬಿಜೆಪಿಯವರು ಸ್ಪಷ್ಟನೆ ನೀಡ್ಬೇಕು ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ಬಗ್ಗೆ ತನಿಖೆ ಆಗಬೇಕು ಆದರೆ ಸರ್ಕಾರ ಮುಂದಾಗಲ್ಲ ಅದೇ ಸಮಸ್ಯೆ. ತನಿಖೆ ಮಾಡೋದು ಸಿಎಂಗೆ ಬಿಟ್ಟ ವಿಚಾರ, ಅವರು ತೀರ್ಮಾನ ತೆಗೆದುಕೊಳ್ಳಬೇಕು. ಬಿಜೆಪಿಯಿಂದ ಪ್ರಾರಂಭವಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ ಅಂದರೆ ನಿಜಾಂಶ ಇರುತ್ತದೆ ಎಂದರು.
ಕೌವಲಂದೆಯಲ್ಲಿ ಮಿನಿ ಪಾಕಿಸ್ತಾನ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಘೋಷಣೆ ಕೂಗಿದ್ರೆ ತಪ್ಪಿತಸ್ಥರಿಗೆ ಶಿಕ್ಷಿಸುವ ಅವಕಾಶ ಇದೆ
ಹಿಂದೆಯೂ ಈ ರೀತಿಯ ಉದಾಹರಣೆ ಆಗಿವೆ. ಹುಬ್ಬಳ್ಳಿ ಮಾದರಿಯಲ್ಲಿ ಸ್ಟ್ರಿಕ್ಟ್ ಆಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಪಿಎಸ್ ಐ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಪಿಎಸ್ಐ ಸಿಬಿಐ ಹಸ್ತಾಂತರವಾದಲ್ಲಿ ಸತ್ಯಾಂಶ ಹೊರ ಬರುತ್ತದೆ. ಮಂತ್ರಿಗಳ, ಶಾಸಕರ, ಉನ್ನತ ಅಧಿಕಾರಿಗಳು ಅಕ್ರಮದಲ್ಲಿದ್ದಾರೆ. ಇನ್ಸಪೆಕ್ಟರ್, ಡಿಎಸ್ ಪಿ ಲೆವಲ್ ತನಿಖೆ ಮಾಡೋದಕ್ಕೆ ಆಗಲ್ಲ. ಹೀಗಾಗಿ ಸಿಬಿಐ ಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
PublicNext
06/05/2022 08:22 pm