ಗದಗ: ತಾವು ಮಾಡುವ ಕೆಲಸ ನೈತಿಕತೆ ಹೊತ್ತ ವ್ಯಕ್ತಿ ಯಾವಾಗಲೂ ಮರ್ಯಾದೆಯಿಂದ ಇರುತ್ತಾರೆ. ಈಗಿನವರಿಗೆ ಮಾನ ಮರ್ಯಾದೆ ಏನೂ ಇಲ್ಲ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಹದ್ದೂರ್ ಶಾಸ್ತ್ರಿಯವರು ರೈಲ್ವೇ ಮಿನಿಸ್ಟರ್ ಆಗಿದ್ದಾಗ ಅಪಘಾತ ಆಗಿತ್ತು. ಅವರು ಅವತ್ತು ಏಕೆ ರಾಜೀನಾಮೆ ನೀಡಿದರು. ಅವರೇನು ರೈಲು ನಡೆಸುತ್ತಿದ್ದರಾ? ಅಪಘಾತ ಆಗಿತ್ತು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಈಗಿನವರಿಗೆ ಮಾನ ಮರ್ಯಾದೆ ಏನೂ ಇಲ್ಲ ಎಂದು ಗುಡುಗಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪಿಎಸ್ಐ ನೇಮಕಾತಿ ಅಕ್ರಮದ ವಿಚಾರವಾಗಿ ಮಾತನಾಡಿದ ಅವರು, ಅಶ್ವತ್ಥ್ ನಾರಾಯಣ ಅವರ ಇಬ್ಬರು ಸಂಬಂಧಿಕರು ಸೆಲೆಕ್ಟ್ ಆಗಿದ್ದಾರೆ. ಒಬ್ಬ 5ನೇ ರ‍್ಯಾಂಕ್, ಇನ್ನೊಬ್ಬ 10ನೇ ರ‍್ಯಾಂಕ್ ಪಡೆದಿದ್ದಾರೆ. ಅವರ ಹತ್ತಿರ ಅಶ್ವತ್ಥ್ ನಾರಾಯಣ ಅವರ ಬ್ರದರ್ ದುಡ್ಡು ತೆಗೆದುಕೊಂಡಿದ್ದಾನೆ ಎನ್ನುವ ಮಾಹಿತಿ ಇದೆ. ಪೊಲೀಸರು ಇವರನ್ನು ಕರೆದುಕೊಂಡು ಹೋಗಿ ವಾಪಸ್ ಬಿಟ್ಟಿದ್ದಾರೆ. ಯಾರ ಪ್ರಭಾವದಿಂದ ಬಿಟ್ಟಿದ್ದಾರೆ. ಅದಕ್ಕೆ ರಾಜೀನಾಮೆ ಕೊಡಿ ಅಂತಾ ಕೇಳಿದ್ದೇನೆ ಎಂದರು.
ಸಿಐಡಿಯಿಂದ ತನಿಖೆ ಮಾಡಿದ್ರೆ ಆಗಲ್ಲ. ಅಮೃತ್ ಪೌಲ್ ಅವರನ್ನು ಏಕೆ ಟ್ರಾನ್ಸಫರ್ ಮಾಡಿದರು. ಡಿವೈಎಸ್ ಪಿ ಅವರನ್ನ ಅರೆಸ್ಟ್ ಮಾಡಿದ್ದಾರೆ. ಇದು ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ ಎಂದು ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.
PublicNext
06/05/2022 08:08 pm