ಕಾಠ್ಮಾಂಡು ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ ಜೊತೆ ಇದ್ದ ಮಹಿಳೆ ನಿಜವಾಗಿಯೂ ಚೀನಾದ ರಾಯಭಾರಿ ಎಂಬುದನ್ನು ಕೊನೆಗೂ ಕಾಂಗ್ರೆಸ್ ಒಪ್ಪಿಕೊಂಡಿದೆ.
ತೆಲಂಗಾಣದ ಕಾಂಗ್ರೆಸ್ ಸಂಸದ ಹಾಗೂ ರಾಹುಲ್ ನಿಕಟವರ್ತಿ ರೇವಂತ್ ರೆಡ್ಡಿ, ಸಂದರ್ಶನವೊಂದರಲ್ಲಿ, ''ಹೌದು ರಾಹುಲ್ ಜೊತೆಗಿದ್ದಿದ್ದು ಚೀನಾ ರಾಯಭಾರಿಯೇ, ಏನೀಗ ? ಬಿಜೆಪಿ ನಾಯಕರಿಗೆ ಅರ್ಥಮಾಡಿಕೊಳ್ಳುವ ಮಾನಸಿಕ ಸಾಮರ್ಥ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ರೇವಂತ್ ರೆಡ್ಡಿಯ ಈ ಹೇಳಿಕೆ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಹುಲ್ ನೇಪಾಳ ಪ್ರವಾಸ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ನೈಟ್ ಕ್ಲಬ್ ದಲ್ಲಿ ರಾಹುಲ್ ಜೊತೆಗಿದ್ದ ಮಹಿಳೆ ಚೀನಾ ರಾಯಭಾರಿ ಅಲ್ಲವೇ ಅಲ್ಲ ಎಂದು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿರುವಾಗ ಅದೇ ಪಕ್ಷದ ನಾಯಕ ಅದನ್ನು ಒಪ್ಪಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ.
ಆ ಮಹಿಳೆ ನೇಪಾಳದಲ್ಲಿ ಚೀನಾದ ರಾಯಭಾರಿ ಹೌ ಯಾಂಕಿ (ಎಲ್) ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಇದನ್ನು ಹೇಗೆ ಅರಗಿಸಿಕೊಳ್ಳುವುದೊ ನೋಡಬೇಕು.
PublicNext
05/05/2022 07:13 pm