ನೇಪಾಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿದ್ದಾರೆ. ಅಮೇಥಿಯ ಬಿಜೆಪಿ ಸಂಸದೆ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಕ್ಷೇತ್ರ ವಯನಾಡಿಗೆ ಭೇಟಿ ಕೊಡ್ತಿರೋ ಈ ಸಮಯದಲ್ಲಿಯೇ ಈ ಒಂದು ಪ್ರಶ್ನೆ ಕೇಳಿ ಬರ್ತಿದೆ. ಆದರೆ, ರಾಹುಲ್ ಗಾಂಧಿ ಎಲ್ಲಿದ್ದಾರೆ ? ಏನ್ ಮಾಡ್ತಿದ್ದಾರೆ ಅನ್ನೋ ಆ ಒಂದು ಸತ್ಯವನ್ನ ಈಗ ಈ ವೀಡಿಯೋ ರಿವೀಲ್ ಮಾಡಿದೆ. ನೋಡಿ.
ಹೌದು. ರಾಹುಲ್ ಗಾಂಧಿ ಪಕ್ಕದ ನೇಪಾಳ್ ದಲ್ಲಿಯೇ ಇದ್ದಾರೆ. ಇಲ್ಲಿಯ ಪಬ್ ವೊಂದರಲ್ಲಿ ಸಖತ್ ಮಜಾ ಮಾಡ್ತಿದ್ದಾರೆ. ಜೊತೆಗೆ ಯಾರೋ ಇದ್ದಾರೆ. ಅದು ಬಿಟ್ಟರೆ, ಕೈಯಲ್ಲಿ ಎಣ್ಣೆ ಗ್ಲಾಸ್ ಏನೂ ಇಲ್ಲ. ಬದಲಾಗಿ ಫೋನ್ ಇದೆ.
ನಿಜ, ರಾಹುಲ್ ಗಾಂಧಿಯ ಈ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಷ್ಟೇ ಹತ್ತು ಹಲವು ಕಾಮೆಂಟ್‌ಗಳಿಗೂ ಕಾರಣ ಆಗಿದೆ.
PublicNext
03/05/2022 02:06 pm