ನವದೆಹಲಿ: ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಿದ್ದಾರೆ.
'ಬಸವ ಜಯಂತಿಯ ಈ ಶುಭಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ. ಜಗಜ್ಯೋತಿ ಬಸವೇಶ್ವರರ ಕುರಿತು 2020ರಲ್ಲಿ ನಾನು ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿರುವೆ' ಎಂದು ಶುಭ ಕೋರಿದ್ದಾರೆ.
ಇದೇ ರೀತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕನ್ನಡದಲ್ಲೇ ಬಸವ ಜಯಂತಿಯ ಶುಭ ಕೋರಿದ್ದಾರೆ.
'ಸರ್ವರಿಗೂ ಕಾಯಕಯೋಗಿ ಬಸವಣ್ಣನವರ ಜಯಂತಿಯ ಶುಭಾಶಯಗಳು. 2 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ವಿಶ್ವಗುರು, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ' ರಾಹುಲ್ ಗಾಂಧಿ ಎಂದು ಆಶಿಸಿದ್ದಾರೆ.
PublicNext
03/05/2022 01:08 pm