ಬೆಂಗಳೂರು: ಯಾರೇ ಆಗಲಿ ಪಕ್ಷಾಂತರ ಮಾಡೋದು ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದೇನೆ. ಹೊರತಾಗಿ ಬಿಜೆಪಿ ಬಗ್ಗೆ ನನ್ನಲ್ಲಿ ಅಸಮಾಧಾನ ಇಲ್ಲ. ಪಕ್ಷಾಂತರದ ಕುರಿತು ನೈತಿಕ ಹಾಗೂ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
“ನಾನು ನನ್ನ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮಾಡಿರುವ ಒಂದೇ ತಪ್ಪೆಂದರೆ ಅದು ಪಕ್ಷಾಂತರ ಮಾಡಿದ್ದು” ಎಂದು ಎಂಟಿಬಿ ನಾಗರಾಜ್ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆ ಬಗ್ಗೆ ಈಗ ಸ್ಪಷ್ಟನೆ ಕೊಟ್ಟಿರುವ ಅವರು, ಈ ಹೇಳಿಕೆ ನೈತಿಕವಾದದ್ದು ಮತ್ತು ಸೈದ್ಧಾಂತಿಕವಾದದ್ದು, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈಗಲೂ ಬಿಜೆಪಿಯಲ್ಲಿದ್ದೇನೆ. ಮುಂದೆಯೂ ಇರುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜು ತಿಳಿಸಿದ್ದಾರೆ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ.ಪಕ್ಷ ಮತ್ತು ನಾಯಕರು ನನ್ನನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದಾರೆ. ನಾನು, ಬಿಜೆಪಿಗೆ ಬಂದಿರುವುದನ್ನು ತಪ್ಪು ಎಂದು ಭಾವಿಸಿಯೂ ಇಲ್ಲ. ಹೇಳಿಯೂ ಇಲ್ಲ . ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ.
PublicNext
02/05/2022 04:59 pm