ಹೈದರಾಬಾದ್: ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಈ ಬಾರೀ ಕಣ್ಣೀರು ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಓವೈಸಿ ತಮ್ಮ ಭಾಷಣದ ವೇಳೆ ಭಾವುಕರಾಗಿ ಕಣ್ಣೀರಾಕಿದ್ದಾರೆ. ಈ ದೃಶ್ಯವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈದರಾಬಾದ್‌ನಲ್ಲಿ ನಿನ್ನೆ (ಶುಕ್ರವಾರ) ನಮಾಜ್ ಮುಗಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಓವೈಸಿ ಎರಡು ಘಟನೆಗಳನ್ನು ನೆನಪಿಸಿಕೊಂಡರು. ಮಧ್ಯಪ್ರದೇಶದ ಖಾರ್ಗೋನ್ ಹಿಂಸಾಚಾರ ಹಾಗೂ ದೆಹಲಿಯ ಜಹಂಗೀರ್ ಪುರಿ ಘಟನೆಯನ್ನು ಓವೈಸಿ ಮೆಲುಕು ಹಾಕಿ ಕಣ್ಣೀರಿಟ್ಟರು.
ಖಾರ್ಗೋನ್ ಮತ್ತು ಜಹಂಗೀರ್ ಪುರಿಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ. ಅವರ ಮನೆಗಳನ್ನು ಕೆಡವಲಾಗಿದೆ. ಆದರೂ ಭರವಸೆ ಮತ್ತು ಧೈರ್ಯವನ್ನು ಕಳೆದುಕೊಳ್ಳಬೇಡಿ ಎಂದು ಓವೈಸಿ ಹೇಳಿದರು.
PublicNext
30/04/2022 08:00 am