ನವದೆಹಲಿ: ಪೆಟ್ರೋಲ್,ಡೀಸೆಲ್ ಬೆಲೆ ಗಗನಕ್ಕೇರಿದೆ. ಇದನ್ನ ಗಮನದಲ್ಲಿ ಇಟ್ಟುಕೊಂಡೇ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯೇತರ ರಾಜ್ಯದ ಮುಖ್ಯಮಂತ್ರಿಗಳಿಗೆ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಒತ್ತಾಯಿಸಿದ್ದರು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈಗ ಕೆಂಡಾಮಂಡಲವಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ ಆಗಬೇಕು. ಇಂಧನದ ಮೇಲಿನ ತೆರಿಗೆಯನ್ನ ಕಡಿತಗೊಳಿಸಿ ಅಂತ ರಾಜ್ಯಗಳನ್ನ ಏಕೆ ಕೇಳಬೇಕು. ಅದರ ಬದಲು ಕೇಂದ್ರವೇ ತೆರಿಗೆಯನ್ನ ಕಡಿಮೆ ಮಾಡಿದ್ರೆ ಆಗೋದಿಲ್ಲವೇ ? ಈಗಾಗಲೇ ಕೇಂದ್ರ ಸರ್ಕಾರ ತೆರಿಗೆಯನ್ನಷ್ಟೇ ಹೆಚ್ಚಿಸಿಲ್ಲ. ಸೆಸ್ ಕೂಡ ಸಂಗ್ರಹಿಸುತ್ತಿದೆ. ಮೋದಿ ಅವರೇ ನಿಮಗೆ ಧೈರ್ಯ ಇದ್ದರೇ,ಮೌಲ್ಯವರ್ಧಿತ ತೆರಿಗೆಗಳ ಬಗ್ಗೆ ವಿವರ ನೀಡಿ ಅಂತಲೇ ಕೆ.ಚಂದ್ರಶೇಖರ್ ರಾವ್ ಸವಾಲ್ ಹಾಕಿದ್ದಾರೆ.
ನಮಲ್ಲಿ 2015 ರಿಂದ ಇಂಧನ ತೆರಿಗೆಯಲ್ಲಿ ಯವುದೇ ರೀತಿಯ ಹೆಚ್ಚಳ ಆಗಿಯೇ ಇಲ್ಲ ಅಂತಲೇ ಕೆ.ಚಂದ್ರಶೇಖರ್ ರಾವ್ ಹೇಳಿಕೊಂಡಿದ್ದಾರೆ.
PublicNext
28/04/2022 02:07 pm