ಚೆನ್ನೈ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲ ಎಂದು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಹೇಳಿ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ನೆಟ್ಟಿಗರು ಸಂಸದೆ ಹೇಳಿಕೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಮಣಿ, 'ನಾನು ತಮಿಳುನಾಡಿನವಳು. ನನಗೆ ರಾಮನ ಪರಿಚಯವಿಲ್ಲ. ನೀವು ತಮಿಳುನಾಡಿನಲ್ಲಿ ಯಾರನ್ನಾದರೂ ಕೇಳಿ. ನಾವು ಯಾವುದೇ ರಾಮಮಂದಿರವನ್ನು ನೋಡಿಲ್ಲ' ಎಂದು ಕೇಳಿಕೆ ಕೊಟ್ಟಿದ್ದಾರೆ.
ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕೆ.ಎಂ.ನಂದಗೋಪಾಲ್ ಎಂಬ ಹೆಸರಿನ ನೆಟ್ಟಿಗ, ತಮಿಳುನಾಡಿನಲ್ಲಿ ರಾಮನಿಗೆ ಅರ್ಪಿತವಾದ ದೇವಾಲಯಗಳನ್ನು ಜ್ಯೋತಿಮಣಿ ಅವರಿಗೆ ನೆನಪಿಸಿದ್ದಾರೆ. 'ತಿರುಚ್ಚಿ ಬಳಿಯ ಶ್ರೀ ರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ, ತಿರುವಣ್ಣಾಮಲೈ ಬಳಿಯ ಆದಿ ಶ್ರೀ ರಂಗಂ ದೇವಾಲಯ, ಪಲ್ಲಿಕೊಂಡದ ಶ್ರೀ ರಂಗನಾಥರ್ ದೇವಾಲಯ, ಮಧುರಾಂತಗಂನಲ್ಲಿ ಏರಿ ಕಥಾ ರಾಮರ್ ದೇವಾಲಯ, ರಾಮೇಶ್ವರಂನಲ್ಲಿ ರಾಮನಾಥ ಸ್ವಾಮಿ ದೇವಾಲಯ ಮತ್ತು ಹಳ್ಳಿಗಳಲ್ಲಿ 1000 ರಾಮ ದೇವಾಲಯಗಳಿವೆ' ಎಂದು ಟ್ವೀಟ್ ಮಾಡಿದ್ದಾರೆ.
PublicNext
21/04/2022 07:50 am