ಕೇರಳ: ರಾಜ್ಯದಲ್ಲಿ ಧಾರ್ಮಿಕ ಭಯೋತ್ಪಾದನೆ ಹೆಚ್ಚಾಗಿದೆ. ಈ ಕುರಿತು ಜಾಗೃತಿ ಅಭಿನಯಾ ಮಾಡಬೇಕಾಗಿದೆ. ಈ ಬಗ್ಗೆ ಈಗಾಗಲೇ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ಧಾರ್ಮಿಕ ಭಯೋತ್ಪಾದನೆ ಹಲವು ಘಟನೆಗಳು ಇಲ್ಲಿ ನಡೆದಿವೆ. ಇವುಗಳನ್ನ ಬಿಜೆಪಿ ತೀವ್ರವಾಗಿಯೇ ವಿರೋಧಿಸುತ್ತಿದೆ. ಈ ನಿಟ್ಟಿನಲ್ಲಿ ಏಪ್ರಿಲ್-29 ರಂದು ನಡೆಯೋ ರಾಜ್ಯ ಬಿಜೆಪಿ ನಾಯಕತ್ವದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿ ಆಗುತ್ತಿದ್ದಾರೆ.
ಲವ್ ಜಿಹಾದ್ ಸೇರಿದಂತೆ ಇಲ್ಲಿ ಸಾಕಷ್ಟು ಧಾರ್ಮಿಕ ಭಯೋತ್ಪಾದನೆಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇಲ್ಲಿ ನಡೆಯೋ ಎಲ್ಲ ವಿಚಾರದ ಬಗ್ಗೇನೂ ಅಮಿತ್ ಶಾ ಅವರಿಗೆ ತಿಳಿಸಲಾಗುವುದು ಎಂದು ಕೆ.ಸುರೇಂದ್ರನ್ ತಿಳಿಸಿದ್ದಾರೆ.
PublicNext
19/04/2022 11:47 am