ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿದ 40% ಕಮಿಷನ್ ವಿವಾದ ಈಗ ಕಾಂಗ್ರೆಸ್ಸಿಗರಿಗೆ ಪ್ರಬಲ ಅಸ್ತ್ರವಾಗಿದೆ.ಸದ್ಯ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರ ಎದೆ ಸೀಳಿದರೆ ಸಿಗುವುದು ನಾಲ್ಕೇ ಅಕ್ಷರ - ಕ ಮಿ ಷ ನ್! ಎಂದು ಟೀಕೆ ಮಾಡಿದ್ದಾರೆ.
ಬಾಯಲ್ಲಿ ಹಿಂದೂ ಧರ್ಮ ಎನ್ನುವ ಬಿಜೆಪಿಯವರು ಅಸಲಿಗೆ 'ಲೂಟಿ ಧರ್ಮ'ದ ಪರಿಪಾಲಕರು. ಎಲ್ಲಾ ಪೂರೈಸಿ, ಮಠಗಳ ಅನುದಾನದಲ್ಲೂ ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಸ್ವಾಮಿಗಳ ಈ ಗಂಭೀರ ಆರೋಪಕ್ಕೆ ಉತ್ತರ ಕೊಡುತ್ತಾರಾ ಅಥವಾ ಅವರಿಗೂ 'ಹಿಂದೂ ವಿರೋಧಿ' ಪಟ್ಟ ಕಟ್ಟುತ್ತಾರಾ ನೋಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮಠಗಳ ಅನುದಾನದಲ್ಲಿಯೂ ಕಮಿಷನ್ ಕೊಡಬೇಕು ಎಂಬ ದಿಂಗಾಲೇಶ್ವರ ಸ್ವಾಮೀಜಿ ಆರೋಪಕ್ಕೆ ಇವರು ಪ್ರತಿಕ್ರಿಯೆಸಿ ಈ ರೀತಿ ಟ್ವೀಟ್ ಮಾಡಿದ್ದಾರೆ.
PublicNext
18/04/2022 05:11 pm