ದಾವಣಗೆರೆ: ರಾಜ್ಯ ಸರ್ಕಾರದ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ 30% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಯಾರ್ಯಾರು, ಯಾವಾಗ ಹಲಾಲ್ ಆಗ್ತಾರೋ ಗೊತ್ತಿಲ್ಲ. ಕೆಲ ಕಾಂಟ್ಯ್ರಾಕ್ಟರ್ ಗಳು ಕೆಲವರ ದಾಖಲೆ ಇದೆ ಅಂತ ಅವರೇ ಹೇಳ್ತಾರೆ. ಸ್ವಾಮಿಜೀ ಕೂಡ ಕಮಿಷನ್ ಬಗ್ಗೆ ಆರೋಪ ಮಾಡಿದ್ದಾರೆ. ಮುಂದೆ ಯಾರ್ಯಾರೂ ಹಲಾಲ್ ಆಗ್ತಾರೆ ನೋಡೋಣ ಎಂದಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಮಾಜಿ ಸಚಿವರೂ ಆದ ಸಹೋದರ ರಮೇಶ್ ಜಾರಕಿಹೊಳಿಗೆ ಈ ರೀತಿ ಟಾಂಗ್ ನೀಡಿದ್ದಾರೆ.
ಸಂತೋಷ ಸಾವಿನಲ್ಲಿ ಮಹಾನ್ ನಾಯಕನ ಕೈವಾಡವಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಅದನ್ನ ಗೋಕಾಕ್ ಗೆ ಹೋಗಿ ಕೇಳಬೇಕು. ಬಾಂಬ್ ಯಾರ ಹತ್ತಿರ ಇದೆ, ಅವರೇ ಸ್ಫೋಟ ಮಾಡಬೇಕು. ಬಾಂಬ್ ಅವರ ಹತ್ತಿರ ಇದೆಯಾದ್ರೆ ಅವರನ್ನೇ ಕೇಳಿ. ನನ್ನ ಹತ್ತಿರ ಯಾವುದೇ ಬಾಂಬ್ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಪರ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿಗೆ ಸಾಫ್ಟ್ ಕಾರ್ನರ್ ಇದೆ. ಮುಂದೆ ಅವರಿಗೆ ಅವಶ್ಯಕತೆ ಇದೆ. ಕಮೀಷನ್ ಆರೋಪದಲ್ಲಿ ಸಂತೋಷ ಸಾವು ಹಿನ್ನಲೆಯಲ್ಲಿ ಈಶ್ವರಪ್ಪ ವಿರುದ್ಧ ತನಿಖೆ ನಡೆಸುವಂತೆ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
PublicNext
18/04/2022 04:03 pm