ಶಿವಮೊಗ್ಗ:ಮಾಜಿ ಸಚಿವ ಈಶ್ವರಪ್ಪ ಮನೆಗೆ ರಾಜ್ಯದ ಪ್ರಮುಖ ಮಠದ ಮಠಾಧೀಶರು ಭೇಟಿ ಕೊಟ್ಟಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಈಶ್ವರಪ್ಪನವರನ್ನ ಸ್ವಾಮೀಜಿ ಸನ್ಮಾನಿಸಿ ಕೆಲ ಹೊತ್ತು ಅವರೊಟ್ಟಿಗೆ ಉಭಯ ಕುಶಲೋಪರಿ ಮಾಡಿದ್ದಾರೆ.
ಈಶ್ವರಪ್ಪ ಅವರ ಮನೆಗೆ ಇಂದು ಬೆಳಗ್ಗೆ ಆದಿ ಚುಂಚನಗಿರಿ ಶಾಖಾ ಮಠದ ಶ್ರೀಗಳು,ಕಾಗಿನೆಲೆ ಕನಕ ಪೀಠದ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಶ್ರೀಗಳು ಭೇಟಿಕೊಟ್ಟರು.
ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಮಠಾಧೀಶರು ಮಾತನಾಡಿದ್ದು, ನೀವೂ ಧೈರ್ಯ ಗೆಡಬೇಡಿ.ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಸ್ವಾಮೀಜಿಗಳು ಈಶ್ವರಪ್ಪ ಅವರಿಗೆ ಧೈರ್ಯ ತುಂಬಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ವಿಶೇಷವಾಗಿ ಮಂತ್ರಾಲಯದ ಸ್ವಾಮೀಜಿಗಳು ಕರೆ ಮಾಡೋ ಮೂಲಕ ಈಶ್ವರಪ್ಪ ಅವರೊಟ್ಟಿಗೆ ಮಾತನಾಡಿದ್ದಾರೆ.
ಮನೆಗೆ ಬಂದ ಮಠಾಧೀಶರಿಗೆ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಈಶ್ವರಪ್ಪ ನೀಡಿ ಮದುವೆಗೂ ಆಹ್ವಾನಿಸಿದ್ದಾರೆ.
PublicNext
16/04/2022 02:05 pm