ಇಳಕಲ್: ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುಖಂಡ ಎಸ್.ಆರ್ ಪಾಟೀಲ್ ಅವರು ಯಾವುದೇ ಕೆಲಸಗಳನ್ನು ಮಾಡಲಿಲ್ಲ. ಅವರದೇ ಪಕ್ಷ ಅಧಿಕಾರದಲ್ಲಿತು. ಅವರೇ ಸಚಿವರಾಗಿದ್ದರು. ನೀರಾವರಿ ಯೋಜನೆಗಳ ಜಾರಿಗೆ ಯಾವುದೇ ಪ್ರಯತ್ನ ಪಟ್ಟಿದ್ದರೆ ಈಗ ಟ್ರ್ಯಾಕ್ಟರ್ ರ್‍ಯಾಲಿ ಅವಶ್ಯಕತೆ ಇರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಳಕಲ್‌ನಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ನೀರಾವರಿ ಯೋಜನೆಗಳ ಜಾರಿ ಕೆಲಸವನ್ನು ಅವರ ಸರ್ಕಾರ ಇದ್ದಾಗ ಮಾಡಿದ್ದರೆ ಅವರಿಗೆ ಬಹಳಷ್ಟು ಒಳ್ಳೆಯ ಹೆಸರು ಬರುತ್ತಿತ್ತು. ಮಂತ್ರಿಗಳಿದ್ದರೂ, ಅವರ ಸರ್ಕಾರವಿತ್ತು, ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದರು. ಆಗ ಏನೂ ಮಾಡದೇ ಈಗ ರ್‍ಯಾಲಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಇಲ್ಲಿಗೆ ಬಂದಾಗ ಚರ್ಚೆಯಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
PublicNext
15/04/2022 07:57 pm