ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯವರಿಗೆ ಕಾರ್ಯಕರ್ತರು ಬಳಸಿ ಬೀಸಾಡೋ ಟೂಲ್ ಕಿಟ್ !

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ರಾಜೀಯರಂಗದಲ್ಲಿ ಭಾರಿ ಸಂಚಲನವೇ ಉಂಟು ಮಾಡಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವೇ ಆಗಿದೆ. ಅದರ ಪರಿಣಾಮ ಈಗ ಬಿಜೆಪಿಯನ್ನ ಕಾಂಗ್ರೆಸ್ ಟೀಕಿಸುತ್ತಲೇ ಇದೆ.

ಬಿಜೆಪಿಗೆ ತಮ್ಮ ಪಕ್ಷದ ಕಾರ್ಯಕರ್ತರು ಅಂದ್ರೆ, ಬಳಸಿ ಬೀಸಾಡೋ ಟೂಲ್ ಕಿಟ್ ಅಂತಲೇ ಕಾಂಗ್ರೆಸ್ ಪಕ್ಷ ಟೀಕೆ ಮಾಡುತ್ತಿದೆ. ಟ್ವಿಟರ್ ಮೂಲಕ ಸರಣಿ ಟ್ವಿಟ್ ಮಾಡಿರೋ ಕರ್ನಾಟಕ ಕಾಂಗ್ರೆಸ್ ಮನಸೋಯಿಚ್ಛೆ ಬಿಜೆಪಿಯನ್ನ ಟೀಕಿಸುತ್ತಲೇ ಇದೆ.

ಬಿಜೆಪಿಯವರು ಲಾಭವಿದ್ದರೇ ಮಾತ್ರ ಅನಾಥ ಶವಕ್ಕೂ ಕೇಸರಿ ಶಾಲು ಹೊದಿಸುತ್ತಾರೆ. ಇವ ನಮ್ಮವ ಅಂತಲೂ ಹೇಳಿ ಬಿಡ್ತಾರೆ. ಲಾಭ ಇಲ್ಲ ಅನ್ಕೋಳಿ, ಆಗ ತಾವೇ ಕೇಸರಿ ಶಾಲು ಹೊದ್ದು ಇವನು ನಮ್ಮವನ್ನಲ್ಲ ಅಂತಲೇ ಹೇಳಿ ಬಿಡ್ತಾರೆ.

ಉಜಯ್ ಗಾಣಿಗ,ವಿನಾಯಕ ಬಾಳಿಗಾ ಸೇರಿದಂತೆ ಇನ್ನೂ ಅನೇಕರು ಬಿಜೆಪಿ ಬಳಸಿ ಬೀಸಾಡಿದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಕಾಂಗ್ರೆಸ್ ಟೀಕೆ ಮಾಡಿದೆ.

Edited By :
PublicNext

PublicNext

15/04/2022 04:00 pm

Cinque Terre

30.14 K

Cinque Terre

8