ಬೆಂಗಳೂರು: ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿ ರೇಸ್ ಕೋರ್ಸ್ ರಸ್ತೆಯಲ್ಲಿ ಕೈ ನಾಯಕರ ಪ್ರತಿಭಟನೆ ಜೋರಾಗಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಸಹ ಪಟ್ಟಿದ್ದಾರೆ.ಇನ್ನು ಈ ರ‍್ಯಾಲಿ ವೇಳೆ ತಿಣುಕಾಡಿ ಬ್ಯಾರಿಕೇಡ್ ಹತ್ತಿದ್ದ ಡಿಕೆಶಿ ದಬಾಕ್ ಅಂತಾ ಪೊಲೀಸರ ಮೇಲೆ ಬಿದ್ದಿದ್ದಾರೆ ಈ ವಿಡಿಯೋ ಭಾರಿ ವೈರಲ್ ಆಗಿದ್ದು ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಗುರುವಾರ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರು ಆರಂಭಿಸಿದ ರ‍್ಯಾಲಿ ನಂತರ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಯನ್ನು ಸಹ ಕೈಗೊಂಡಿದ್ದಾರೆ.
PublicNext
15/04/2022 03:02 pm