ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾರಿಕೇಡ್ ಹಾರುವಷ್ಟು ಕೆಪ್ಯಾಸಿಟಿ ಇದ್ದವರಿಗೆ ಜೈಲಿನಲ್ಲಿ ಆರೋಗ್ಯ ಕೈಕೊಡ್ತಾ?: ಯತ್ನಾಳ್ ಪ್ರಶ್ನೆ

ವಿಜಯಪುರ: ಈಶ್ವರಪ್ಪ ಪ್ರಕರಣದ ಹಿಂದೆ ಕಾಂಗ್ರೆಸ್‌ನವರ ಕೈವಾಡ ಇದೆ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಹಾಗಾಗಿ ಈ ರೀತಿ ಮಾಡ್ತಿದ್ದಾರೆ. ಮೊದಲೆಲ್ಲ ಸಜ್ಜನ ರಾಜಕಾರಣಕ್ಕೆ‌ ಕರ್ನಾಟಕ ಹೆಸರಾಗಿತ್ತು. ಈಗ ಇನ್ನೊಬ್ಬರ ಸಿ.ಡಿ ಮಾಡಿಸುವವರು, ಎಡಿಟ್ ಮಾಡಿಸುವವರು, ಬ್ಲಾಕ್‌ಮೇಲ್ ಮಾಡಿಸುವವರು ಹೆಚ್ಚಾಗಿದ್ದಾರೆ ಎ‌ಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಕಾಮಗಾರಿ ಮಾಡಿಸಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ. ಅಲ್ಲಿ ಕಾಮಗಾರಿ ನಡೆಸಲು ಹೇಗೆ ಅನುಮತಿ ನೀಡಿದರು? ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡದ ಬಗ್ಗೆ ಆರೋಪ ಮಾಡಿರುವ ರಮೇಶ್ ಜಾರಕಿಹೊಳಿ ಅವರು ಆದಷ್ಟು ಬೇಗ ಹೆಸರುಗಳನ್ನು ಬಹಿರಂಗಪಡಿಸಬೇಕು. ರಾಜ್ಯದಲ್ಲಿ ಬರೀ ಬ್ಲಾಕ್‌ಮೇಲ್ ರಾಜಕಾರಣ ಶುರುವಾಗಿದೆ.

ಈಶ್ವರಪ್ಪ ಅವರನ್ನು ಜೈಲಿಗೆ ಹಾಕುವ ಮೊದಲು ಈ ಬ್ಲಾಕ್‌ಮೇಲ್ ಮಾಡುವವರನ್ನು ಜೈಲಿಗೆ ಹಾಕಬೇಕು. ಡಿ.ಕೆ ಶಿವಕುಮಾರ್ ಅವರು ಪೊಲೀಸ್ ಬ್ಯಾರಿಕೇಡ್ ಜಿಗಿದು ಹೋಗುವಷ್ಟು ದೈಹಿಕ ಫಿಟ್ನೆಸ್ ಇದೆ. ಆದ್ರೆ ಜೈಲಿನಲ್ಲಿ ಇದ್ದಾಗ ಒಮ್ಮಿಂದೊಮ್ಮೆಲೇ ಅವರ ಆರೋಗ್ಯ ಕೈಕೊಟ್ಟಿತಾ? ಈಗ ಅವರಿಗೆ ಆರೋಗ್ಯ ಸಮಸ್ಯೆ ಇಲ್ಲ‌. ಅವರು ಜೈಲಿಗೆ ಹೋಗಲು ಸಾಮರ್ಥ್ಯ ಹೊಂದಿದ್ದಾರೆ ಎಂದ ಯತ್ನಾಳ್, ಡಿ.ಕೆ ಶಿವಕುಮಾರ್ ಮೇಲೆ ಚಾಟಿ ಬೀಸಿದ್ದಾರೆ.

Edited By : Shivu K
PublicNext

PublicNext

15/04/2022 01:39 pm

Cinque Terre

51.57 K

Cinque Terre

12