ಮಳವಳ್ಳಿ(ಮಂಡ್ಯ): ರಾಜ್ಯದಲ್ಲಿ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವ ಜೆಡಿಎಸ್ ಪಕ್ಷ ಬರುವ ಚುನಾವಣೆಯಲ್ಲಾದರೂ ಅಧಿಕಾರದ ಚುಕ್ಕಾಣೆ ಹಿಡಿಯಲು ಹವಣಿಸುತ್ತಿದೆ.
ಇದರ ಮಧ್ಯೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ‘ನಾನು ಮಣ್ಣಿಗೆ ಹೋಗುವುದರೊಳಗಾಗಿ ಜೆಡಿಎಸ್ ಪಕ್ಷದಿಂದ ರಾಜ್ಯದಲ್ಲಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಮಳವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಯಲ್ಲಿ ಮಾತನಾಡಿ, ‘ಅನೇಕ ದಲಿತ ನಾಯಕರಿಗೆ ಪಕ್ಷದಲ್ಲಿ, ಸರ್ಕಾರದ ಮಟ್ಟದಲ್ಲಿ ಜೆಡಿಎಸ್ ಉನ್ನತ ಹುದ್ದೆಗಳನ್ನು ನೀಡಿದೆ ಎಂದರು.
‘ನನ್ನ ಬಳಿಗೆ ಬರುವ ಜನರ ಜಾತಿ, ಧರ್ಮದ ಬಗ್ಗೆ ಕೇಳದೆ, ನಿಮ್ಮ ಕಷ್ಟ ವೇನು ಎಂದಷ್ಟೇ ಕೇಳುತ್ತೇನೆ. ಐದು ವರ್ಷ ಅಧಿಕಾರ ಕೊಟ್ಟರೆ ಜನ ಮೆಚ್ಚುವ ಕಾರ್ಯಕ್ರಮಗಳನ್ನು ರೂಪಿಸುವೆ, ಮೈತ್ರಿ ರಾಜಕಾರಣ ಖಂಡಿತಾ ಬೇಡ’ ಎಂದರು.
PublicNext
15/04/2022 07:36 am