ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಚಿವ ಈಶ್ವರಪ್ಪ ಪಾಲಿಗೆ ಉರುಳಾಗಿ ಪರಿಣಮಿಸಿದ್ದು. ಅವರ ತಲೆದಂಡ ಖಚಿತ ಎಂಬ ವಾತಾವರಣ ನಿರ್ಮಾಣವಾಗಿದೆ. ನಾನೇಕೆ ರಾಜಿನಾಮೆ ಕೊಡಬೇಕು ಎಂದು ನಿನ್ನೆ ತಾನೆ ಅಬ್ಬರಿಸಿದ್ದರು ಈಶ್ವರಪ್ಪ. ಆದರೆ ಒಂದು ಕಡೆ ಅವರ ರಾಜಿನಾಮೆಗೆ ಒತ್ತಡ ಹೆಚ್ಚುತ್ತಿದ್ದಂತೆಯೇ ಥಂಡಾ ಹೊಡೆದುಹೋಗಿದ್ದಾರೆ.
ಅದರಲ್ಲೂ ಹೈಕಮಾಂಡ್ ಕೂಡಾ ಸಿಎಂ ಗೆ ಈಶ್ವರಪ್ಪ ರಾಜಿನಾಮೆ ಪಡೆಯಲು ಸೂಚನೆ ನೀಡಿದೆ ಅಂತ ಗೊತ್ತಾದ ತಕ್ಷಣ ಒಂದು ನಿರ್ಧಾರಕ್ಕೆ ಬಂದವರಂತೆ ಸ್ವಕ್ಷೇತ್ರದ ಕಡೆ ಹೊರಟು ನಿಂದಿತ್ತಾರೆ.ಈಶ್ವರಪ್ಪನವರನ್ನು ಕೈ ಬಿಡಲು ಹಿಂದೆಯೇ ನಿರ್ಧಾರ ಆಗಿತ್ತು ಹಾಗೆ ನೋಡಿದ್ರೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅನೇಕ ಹಿರಿಯ ಸಚಿವರನ್ನು ಕೈಬಿಟ್ಟು ಹೊಸಮುಖಗಳಿಗೆ ಅವಕಾಶ ನೀಡಬೇಕು ಎನ್ನುವುದು ಈ ಹಿಂದೆಯೇ ನಿರ್ಧರಿತವಾಗಿತ್ತು.
ಅದರಲ್ಲಿ ಈಶ್ವರಪ್ಪ ನವರ ಹೆಸರೇ ಮುಂಚೂಣಿಯಲ್ಲಿತ್ತು. ಕಳೆದ ವಾರ ಸಿಎಂ ದೆಹಲಿಗೆ ಭೇಟಿ ನೀಡದಾಗಲೇ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಆಗ ಹೈಕಮಾಂಡ್ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ ಅಲ್ಲಿಗೆ ಈಶ್ವರಪ್ಪ ಬಚಾವ್ ಆಗಿದ್ರು.
ಈಶ್ವರಪ್ಪ ನವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಅದರಲ್ಲೂ ಈ ಹಿಂದೆ ಕೇಸರಿ ಧ್ವಜವನ್ನು ಕೆಂಪುಕೋಟೆ ಮೇಲೆ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿಕೆ ಕೊಟ್ಟಾಗ ಅದರ ಬಗ್ಗೆ ಡಾ ನಡ್ಡಾ ಅಸಮಧಾನ ವ್ಯಕ್ತಪಡಿಸಿ ಆ ರೀತಿ ಹೇಳಿಕೆ ಇನ್ನು ಮುಂದೆ ಕೊಡದಂತೆ ಈಶ್ವರಪ್ಪನವರಿಗೆ ತಾಕೀತು ಮಾಡಿದ್ದರು.
ಈಶ್ವರಪ್ಪನ ನಾಲಿಗೆಯೇ ಅವರಿಗೆ ಸದಾ ಶತ್ರುವಾಗಿ ಕೆಲಸ ಮಾಡಿದೆ. ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದಲೇ ಅವರು ಸದಾ ಸುದ್ದಿಯಲ್ಲಿರುತ್ತಾರೆ.ಎಲ್ಲದಕ್ಕೂ ಹಿಂದುತ್ವದ ಲೇಬಲ್ ಹಚ್ಚಿ ಬಚಾವಾಗುತ್ತಿದ್ದ ಈಶ್ವರಪ್ಪನವರಿಗೆ ಸಂತೋಷ ಪ್ರಕರಣ ಮಾತ್ರ ಸರಿಯಾಗಿ ಕಚ್ಚಿ ಕೊಂಡಿದೆ. ಅವರ ತಲೆ ದಂಡದ ತನಕ ಬಂದು ತಲುಪಿದೆ.
ಕಾಲಾಯೈ ತಸ್ಮೈ ನಮಃ ಹಿಂದೆ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ. DYSP ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಈಶ್ವರಪ್ಪ ನವರು ಸದನದ ಒಳಗೂ ಹೊರಗೂ ದೊಡ್ಡ ಹೋರಾಟ ನಡೆಸಿದ್ರು ಆಗ ಗೃಹಸಚಿವರಾಗಿದ್ದ ಕೆಜೆ ಜಾಜ್೯ ಅವರ ರಾಜೀನಾಮೆಗೆ ಪಟ್ಟು ಹಿಡಿದು ಒತ್ತಾಯಿಸಿದ್ರು. ಈಗ ಅದೇ ತರಹದ ಸಂದರ್ಭ ಈಶ್ವರಪ್ಪನವರಿಗೆ ಬಂದಿದೆ.
ಸಂತೋಷ ಆತ್ಮಹತ್ಯೆಗೂ ಮುನ್ನ ಸುದೀರ್ಘ ಡೆತ್ ನೋಟ್ ಬರೆದು ಅದನ್ನು Watsup ಸಂದೇಶವನ್ನು ಎಲ್ಲಕಡೆ ಕಳಿಸಿದ್ದಾರೆ. ಅದರಲ್ಲಿ ಈಶ್ವರಪ್ಪನವರೇ ನನ್ನ ಸಾವಿಗೆ ನೇರ ಹೊಣೆ ಎಂದು ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಸಂತೋಷ್ ಸಹೋದರ ಸಂಬಂಧಿ ನೀಡಿದ ದೂರಿನನ್ವಯ ಈಶ್ವರಪ್ಪ ವಿರುದ್ಧ ಎಫ್ ಐ ಆರ್ ಕೂಡಾ ದಾಖಲಾಗಿದೆ. ಅದರಲ್ಲಿ A1 ಆರೋಪಿ ಈಶ್ವರಪ್ಪನವರೇ ಆಗಿದ್ದಾರೆ. ಹಾಗಾಗಿ ಈಶ್ವರಪ್ಪ ನವರಿಗೆ ರಾಜೀನಾಮೆ ನೀಡದೆ ಅನ್ಯ ಮಾರ್ಗವಿಲ್ಲದಂತ್ತಾಘಿದೆ.
ಒಂದು ಹಂತದಲ್ಲಿ ಈಶ್ವರಪ್ಪ ನವನ್ನು ಸಂಪುಟದಿಂದ ಕೈಬಿಡಬೇಕು ಎಂಬ ಹವಣಿಕೆಯಲ್ಲಿದ್ದ ಹೈಕಮಾಂಡ್ ಗೆ ಅವರನ ರಾಜೀನಾಮೆ ಪಡೆಯಲು ಪ್ರಬಲ ಕಾರಣ ದೊರೆತಂತಾಗಿದೆ. ವಿಪಕ್ಷ ಕಾಂಗ್ರೆಸ್ ಗಂತೂ ಇದು ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಈಶ್ವರಪ್ಪ ತಮ್ಮ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ರಾಜಿನಾಮೆ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.
ಪ್ರವೀಣ್ ರಾವ್ ಪೊಲಿಟಿಕಲ್ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
13/04/2022 01:48 pm