ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಾನು ಇನ್ನು 24 ಗಂಟೆ ಟೈಂ ಕೊಡ್ತೀನಿ ಅಷ್ಟೇ, ನಿಮಗೆ ತಾಕತ್ತಿದ್ದರೆ..': ಪ್ರಧಾನಿ ಮೋದಿಗೆ ಕೆಸಿಆರ್ ಸವಾಲು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ಪ್ರಧಾನಿ ಮತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೈಮುಗಿದು ಕೇಳುತ್ತೇನೆ, ದಯವಿಟ್ಟು ನಮ್ಮ ಆಹಾರ ಧಾನ್ಯಗಳನ್ನು ಖರೀದಿಸಿ. ನಿಮಗೆ 24 ಗಂಟೆಗಳನ್ನು ನೀಡುತ್ತೇನೆ. ಇದರ ಬಳಿಕ ನಮ್ಮ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಎಚ್ಚರಿಕೆ ನೀಡಿದ್ದಾರೆ.

ರೈತರಿಂದ ಅಕ್ಕಿ ಖರೀದಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಪ್ರಧಾನಿ ಮೋದಿ ಅವರಿಗೆ ನೇರ ಸವಾಲು ಹಾಕಿದ್ದಾರೆ.

"ತೆಲಂಗಾಣ ತನ್ನ ಹಕ್ಕನ್ನು ಕೇಳುತ್ತದೆ. ಪ್ರಧಾನಿ ಹೊಸ ಕೃಷಿ ನೀತಿಯನ್ನು ರೂಪಿಸಬೇಕು. ಅದಕ್ಕೆ ನಾವು ಸಹ ಕೊಡುಗೆ ನೀಡುತ್ತೇವೆ. ನೀವು ಅದನ್ನು ಮಾಡದಿದ್ದರೆ, ನಂತರ ನಿಮ್ಮನ್ನು ತೆಗೆದುಹಾಕಲಾಗುತ್ತದೆ , ಹೊಸ ಸರ್ಕಾರವು ಬರಬೇಕಾಗುತ್ತೆ ಎಂದು ಕೆಸಿಆರ್ ಅಬ್ಬರಿಸಿದರು. ಸರ್ಕಾರವನ್ನು ಉರುಳಿಸುವ ಶಕ್ತಿ ಇರುವ ರೈತರ ಭಾವನೆಗಳೊಂದಿಗೆ ಆಟವಾಡಬೇಡಿ, ರೈತರು ಭಿಕ್ಷುಕರಲ್ಲ ಎಂದು ಗುಡುಗಿದ್ದಾರೆ.

Edited By : Vijay Kumar
PublicNext

PublicNext

11/04/2022 04:39 pm

Cinque Terre

61.34 K

Cinque Terre

40