ಇಸ್ಲಾಮಾಬಾದ್: ಭಾರತದೊಂದಿಗೆ ನಾವು ಶಾಂತಿ ಬಯಸುತ್ತೇವೆ. ಆದರೆ, ಕಾಶ್ಮೀರ ವಿಷಯ ಇತ್ಯರ್ಥವಾಗಬೇಕು. ಹೀಗೆ ಹೇಳಿದ್ದು ಯಾರು ಗೊತ್ತೇ ? ಪಾಕ್ ಪ್ರಧಾನಿ ಅಭ್ಯರ್ಥಿ ಶೆಹಬಾಜ್ ಷರೀಫ್.
ಇಮ್ರಾನ್ ಖಾನ್ ಪ್ರಧಾನಿ ಸ್ಥಾನದಿಂದ ಇಳಿದ ಬಳಿಕ ಇಲ್ಲಿ ಈಗ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭಗೊಂಡಿದೆ.ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅಂತಲೂ ಹೇಳಲಾಗುತ್ತಿದೆ. ಪಾಕಿಸ್ತಾನ್ ಮುಸ್ಲೀಂ ಲೀಗ್ ನ ಶಹಬಾಜ್ ಷರೀಫ್ ಈಗಲೇ ಕಾಶ್ಮೀರದ ವಿಷಯದ ಬಗ್ಗೇನೆ ಮಾತನಾಡಿದ್ದಾರೆ.
ಭಾರತದೊಂದಿಗೆ ನಾವು ಶಾಂತಿಯನ್ನೆ ಬಯಸುತ್ತೇವೆ. ಆದರೆ, ಅದು ಸಾಧ್ಯವಾಗಲೇಬೇಕಾದರೆ, ಕಾಶ್ಮೀರ ವಿಷಯ ಇತ್ಯರ್ಥ ಆಗಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ. ಇಲ್ಲವಾದರೆ ಅದು ಅಸಾಧ್ಯ ಅಂತಲೇ ಶಹಬಾಜ್ ಷರೀಫ್ ಹೇಳಿದ್ದಾರೆ.
PublicNext
11/04/2022 08:21 am