ವಿಜಯಪುರ: ಪಂಚಮಸಾಲಿ ಸಮಾಜದ ವಿಚಾರಕ್ಕೆ ಬಂದ್ರೆ ಯಾವುದೇ ರಾಜಕೀಯ ಹೊಂದಾಣಿಕೆ ಇಲ್ಲ. ಬೊಮ್ಮಾಯಿ ಅವರೇ ನನ್ನನ್ನು ನೀವು ಮಂತ್ರಿ ಮಾಡ್ತೀರೋ, ಬಿಡ್ತೀರೋ ನಮಗೆ ಬೇಕಾಗಿಲ್ಲ. ಆದ್ರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟವಾಗಿ ಹೇಳಿಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಇಂಚಗೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಮುಖ್ಯಮಂತ್ರಿಯನ್ನು ಕೆಳಗಿಳಿಸುವ ತಾಕತ್ತು ನಮಗಿದೆ ಎಂದಿದ್ದಾರೆ. ನಮ್ಮ ಸಮಾಜಕ್ಕೆ ಉಲ್ಟ ಬಿದ್ದರೆ ಮುಗೀತು. ಹೀಗಾಗಯೇ ಸಿಎಂ ಬೊಮ್ಮಾಯಿಗೆ ನಮ್ಮ ಸಮಾಜದ ಬಗ್ಗೆ ಭಯ ಇದೆ. ಹೀಗಾಗಿಯೇ ಉಳಿದ ಶಾಸಕರಿಗಿಂತ ನನ್ನ ಕ್ಷೇತ್ರಕ್ಕೆ ಎರಡ್ಮೂರು ಕೋಟಿ ಹೆಚ್ಚು ಅನುದಾನ ಕೊಡ್ತಾರೆ ಎಂದು ಯತ್ನಾಳ್ ಗುಡುಗಿದ್ದಾರೆ.
PublicNext
10/04/2022 07:08 pm