ಬೆಳಗಾವಿ: ನಮ್ಮ ದೇಶದಲ್ಲಿ ಇರಲು ಬಯಸುವವರು ಮೊದಲು ಈ ದೇಶದ ಸಂವಿಧಾನಕ್ಕೆ ಗೌರವ ಕೊಡಬೇಕು. ಸಂವಿಧಾನ ಪಾಲಿಸದೇ ಇರುವವರಿಗೆ ಈ ದೇಶದಲ್ಲಿಇರುವ ಹಕ್ಕು ಇಲ್ಲ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ದೇಶದ ಸಂವಿಧಾನ ಪಾಲನೆ ಮಾಡದವರಿಗೆ ಈ ದೇಶದಲ್ಲಿರುವ ಹಕ್ಕು ಇಲ್ಲ ಸಂವಿಧಾನ ಪಾಲನೆ ಮಾಡಲ್ಲ ಅನ್ನೋರು ಬೇರೆ ದೇಶಕ್ಕೆ ಹೋಗಬೇಕು. ಯಾವ ದೇಶದ ಸಂವಿಧಾನ ಪಾಲನೆ ಮಾಡುತ್ತಾರೆ ಆ ದೇಶಕ್ಕೆ ಹೋಗಲಿ ಎಂದರು.
ಇನ್ನು ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಪಾಕಿಸ್ತಾನ ನೋಟು ಪತ್ತೆಯಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ, ಬೆಳಗಾವಿಯ ಕೆಲವು ಏರಿಯಾಗಳಲ್ಲಿ ಪರಿಶೀಲಿಸಿದರೆ ಬೇರೆ ದೇಶದ ನೋಟುಗಳು, ಶಸ್ತ್ರಾಸ್ತ್ರಗಳು ಸಿಗುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
PublicNext
10/04/2022 03:19 pm