ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ರಷ್ಯಾ ಅಮಾನತ್ತು

ವಿಶ್ವಸಂಸ್ಥೆ: ರಷ್ಯಾ ಅಧ್ಯಕ್ಷ ಪುಟಿನ್ ಟೈಮ್ ಚೆನ್ನಾಗಿಲ್ಲ ಬಿಡಿ. ಉಕ್ರೇನ್ ಮೇಲೆ ದಾಳಿ ಮಾಡಿದ್ದೇ ಬಂತು. ಯುದ್ಧ ಗೆಲ್ಲುವ ಖುಷಿ ಆಕಡೆ ಇರಲಿ, ಆಗಿದ್ದೇಲ್ಲ ಹೆಚ್ಚಿನ ತೊಂದರೆಗಳೇ. ಈಗ ನೋಡಿ, ರಷ್ಯಾ ದೇಶವನ್ನ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ಅಮಾನತ್ತು ಮಾಡಿದೆ.

ವಿಶ್ವ ಸಂಸ್ಥೆ ಸಮಾನ್ಯ ಸಭೆಯಲ್ಲಿ ಈಗಾಗಲೇ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಮಾನವ ಹಕ್ಕುಗಳ ಆಯೋಗದಿಂದ ರಷ್ಯಾ ದೇಶವನ್ನ ಹೊರಗಿಡುವ ಕರಡು ಕೂಡ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿದೆ.

ವಿಶ್ವ ಸಂಸ್ಥೆಯ ನಿರ್ಣಯಕ್ಕೆ ಬರೋಬ್ಬರಿ 93 ದೇಶಗಳು ಬೆಂಬಲಿಸಿವೆ. ಅಲ್ಲಿಗೆ ರಷ್ಯಾ ದೇಶವನ್ನ ಸುಲಭವಾಗಿಯೇ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ಈಗ ಅಮಾನತ್ತು ಮಾಡಲು ಸಾಧ್ಯವಾಗಿದೆ. ರಷ್ಯಾ ದೇಶದ ಸೈನಿಕರು ಉಕ್ರೇನ್ ಮೇಲೆ ತೋರಿದ ಆ ಕ್ರೌರ್ಯವೇ ಈ ಒಂದು ನಿರ್ಣಯ ತೆಗೆದುಕೊಳ್ಳಲು ಬಲವಾದ ಕಾರಣ ಆಗಿದೆ.

ಆದರೆ ಈ ವಿಷಯಲ್ಲಿ ಭಾರತ ತಟಸ್ಥವಾಗಿಯೇ ಉಳಿದಿದೆ. ಭಾರತ ಸೇರಿ ಇನ್ನೂ 58 ದೇಶಗಳು ಈ ನಿರ್ಧಾರಕ್ಕೆ ಮತಚಲಾಯಿಸೋ ವಿಷಯದಿಂದ ದೂರವೇ ಉಳಿದು ಬಿಟ್ಟಿವೆ.

Edited By :
PublicNext

PublicNext

08/04/2022 07:37 am

Cinque Terre

37.46 K

Cinque Terre

0

ಸಂಬಂಧಿತ ಸುದ್ದಿ